ನನ್ನ ಮನೆ, ಸಿದ್ದರಾಮಯ್ಯನವರ ಮನೆ ಎಂದು ಸುತ್ತಾಡೋದನ್ನು ಬಿಡಿ ಎಂದು ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದ್ದಾರೆ. ಕೇಳಿದ್ದನ್ನು ಅಲ್ಲಿಗೆ, ಅಲ್ಲಿ ಕೇಳಿದ್ದನ್ನು ಇಲ್ಲಿ ಹೇಳುವುದನ್ನು ಬಿಡಿ. ಈ ಮೂಲಕ ಒಬ್ಬರ ವಿಷಯವನ್ನು ಇನ್ನೊಬ್ಬರ ಬಳಿ ಹೇಳಿ ಜಗಳಕ್ಕೆ ಕಾರಣವಾಗುವ ಚಾಳಿಯನ್ನು ಬಿಡಬೇಕು, ಪಕ್ಷ ಕಟ್ಟುವ ಕೆಲಸ ಮಾಡಬೇಕು. ತಾಳ್ಮೆಯಿಂದಿರಿ. ಎಲ್ಲರಿಗೂ ಅಧಿಕಾರ ಸಿಗುತ್ತದೆ.ನಮಗೆಲ್ಲರಿಗೂ ಈಗ 2024ರ ಚುನಾವಣೆಯೇ ಮುಖ್ಯ ಈಗ ಅಧಿಕಾರದ ವಿಚಾರ ಬಿಡಿ, ಮೊದಲು ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸಲುವ ಕೆಲಸ ಮಾಡೋಣ ಎಂದಿದ್ದಾರೆ.