ಆಚಾರ ವಿಚಾರಕ್ಕೆ, ಪೂಜೆ ಪುನಸ್ಕಾರಗಳಿಗೆ, ಅಂಧಕ್ಕಾರಕ್ಕೆ, ಮೂಡ ನಂಬಿಕೆಗಳಿಗೆ, ಕಟ್ಟಪ್ಪಣೆಗಳಿಗೆ ಸೀಮೀತವಾಗಿರುವ ಧರ್ಮ ಧರ್ಮವೇ ಅಲ್ಲ. ಸಮಾಜದಲ್ಲಿ ನೊಂದ ಮನುಷ್ಯನನ್ನು ದುಶ್ಚಟಗಳಿಗೆ ದಾಸನಾಗಿರುವವನನ್ನು, ಬಡತನದಿಂದ ಕಂಗೆಟ್ಟಿರುವವನ್ನು, ರೋಗಗಳಿಂದ ನರಳುತ್ತಿರುವವನನ್ನು ಆರೈಕೆ ಮಾಡಿ ಅವನನ್ನು ಮೇಲೇತ್ತಲು ಪ್ರಯತ್ನಿಸುವದೇ ನಿಜವಾದ ಧರ್ಮ ಎಂದು ಅಭಿನವ ರಾಚೋಟೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಇಂಡಿ ಪಟ್ಟಣದ ಕಾಳಿಕಾ ದೇವಿ ಮಂಗಲ ಕಾರ್ಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ ಹಮ್ಮಿಕೊಂಡಿದ್ದ ೭ ದಿನಗಳ ಮಧ್ಯವರ್ಜನ ಶಿಬಿರದ ಸಾನಿಧ್ಯತೆ ವಹಿಸಿ ಮಾತನಾಡಿದರು.
ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ದೂರದ ಇಂಡಿ ಪಟ್ಟಣದಲ್ಲಿಯೂ ಕಳೆದ ೭ ವರ್ಷಗಳಿಂದ ಅನೇಕ ಸಾಮಾಜಿಕ ಪ್ರಗತಿಪರ ಕೆಲಸಗಳನ್ನು ಮಾಡುತ್ತಿದೆ. ಗ್ರಾಮಗಳಲ್ಲಿ ಕುಡಿಯುವ ನೀರು, ಸ್ವಚ್ಚತೆ, ರಸ್ತೆ ಅಭಿವೃದ್ಧಿ, ನಿರುದ್ಯೋಗಿಗಳಿಗೆ ಕೆಲಸ, ಕೈಗಾರಿಕೋದ್ಯಮಿ ಬೆಳವಣಿಗೆ, ಬಡವರಿಗೆ ಉದ್ಯೋಗ, ನಿರುದ್ಯೋಗಿಗಳಿಗೆ ಆರ್ಥಿಕ ಸಹಾಯ ಮುಂತಾದ ಕೆಲಸಗಳೊಂದಿಗೆ ಮಧ್ಯವರ್ಜನಿಗಳನ್ನು ಕೂಡಿಸಿ, ಅವರಿಗೆ ತಿಳುವಳಿಕೆ ನೀಡಿ, ಉಟೋಪಚಾರ ಮಾಡಿಸಿ, ಮಧ್ಯ ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಸಿ, ದುಶ್ಚಟದಿಂದ ಮುಕ್ತಿ ಹೊಂದುವAತೆ ಕೆಲಸ ಮಾಡುತ್ತಿರವದು ಶ್ಲಾಘನೀಯ ಕಾರ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಂತೇಶ್ವರ ಟ್ರಸ್ಟ ಕಮೀಟಿ ಅಧ್ಯಕ್ಷ ಕಾಸೂಗೌಡ ಬಿರಾದಾರ ಮಾತನಾಡಿ, ಧರ್ಮಸ್ಥಳದ ಸಂಸ್ಥೆ ಮಾಡುವ ಸಾಮಾಜಿಕ ಕಾರ್ಯಕ್ರಮಗಳಿಗೆ ತನು, ಮನ, ಧನದಿಂದ ಬೆಂಬಲಿಸುವದಾಗಿ ತಿಳಿಸಿದರು.
ಹಿರಿಯರಾದ ಧನ್ಯಕುಮಾರ ಶಹಾ ಮಧ್ಯವರ್ಜನ ಶಿಬಿರದ ಅಧ್ಯಕ್ಷ ಪ್ರಕಾಶ ಬಿರಾದಾರ, ಪುರಸಭೆಯ ಸದಸ್ಯ ಅನೀಲಗೌಡ ಬಿರಾದಾರ, ಅಯೂಬ ನಾಟೀಕಾರ , ಸಂತೋಷಕುಮಾರ , ಎಲ್.ಎಂ.ನಟರಾಜ ಮೇಲ್ವಿಚಾರಕಿ ಸರಸ್ವತಿ ಮಾತನಾಡಿದರು.
ವೇದಿಕೆಯಲ್ಲಿ ಭೀಮರಾಯ ಬಿಡಿಗೇರ, ಸಂತೋಷ ಗವಳಿ, ಶಶಿಕಲಾ ಬೆಟಗೇರಿ, ದೇವೇಂದ್ರ ಕುಂಬಾರ, ಜ್ಯೋತಿ ವಂದಾಲ, ಬಸಮ್ಮ ದೇಶಮುಖ, ಬಿ.ಎಸ್.ಪಾಟೀಲ, ಸೌಮ್ಯ, ಮಲ್ಲೇಶಪ್ಪ, ರಾಜೇಶ ಇದ್ದರು.