ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಐ.ಸಿ.ಟ್ರಸ್ಟ್ ( ರಿ) ಇಂಡಿ ತಾಲೂಕು ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜಾ ಸಮಿತಿ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಇಂಡಿ ಡಾ. ವಿರೇಂದ್ರ ಹೆಗ್ಗಡೆಯವರು ಮಾತೋಶ್ರೀ ಡಾ.ಹೇಮಾವತಿ ಹೆಗ್ಗಡೆಯವರ ಕೃಪಾರ್ಶೀವಾದ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿ ಶಾಸಕರಾದ ಮಾನ್ಯ ಶ್ರೀ ಯಶವಂತರಾಯಗೌಡ ವ್ಹಿ. ಪಾಟೀಲ ಅವರು, ನಮ್ಮ ಪ್ರಾಚೀನ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರಗಳು ನಮ್ಮ ಪೂರ್ವಜರು ನೀಡಿದ ಬಳುವಳಿ. ಸತ್ಯನಾರಾಯಣ ಪೂಜಾ ಮಾಡುವ ಮೂಲಕ ಧರ್ಮಸ್ಥಳ ಸೇವಾ ಸಂಸ್ಥೆ ಲೋಕಕಲ್ಯಾಣ ಬಯಸುತ್ತಿದೆ. ಇಂತಹ ಧಾರ್ಮಿಕ ಕಾರ್ಯಗಳಿಂದ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರು ಮಾತೋಶ್ರೀಯವರು ಸರಳ, ಬದುಕು ಕಟ್ಟಿಕೊಂಡು ನಾಡಿನಾದ್ಯಂತ ಅಷ್ಟೇ ಅಲ್ಲ ದೇಶ ವ್ಯಾಪಿ ಗ್ರಾಮೀಣ ಭಾಗದಲ್ಲಿ ಜನರಿಗೆ ಸಹಾಯ -ಸಹಕಾರ ಸಲ್ಲಿಸುತ್ತ ಸಾಮಾನ್ಯ ಜನರ ಆರ್ಥಿಕ ಭದ್ರತೆ ಮಾಡುವ ಮೂಲಕ ಕ್ರಾಂತಿಕಾರಕ ಬದಲಾವಣೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು.
ವಿಜಯಪುರದ ಸಿದ್ದೇಶ್ವರ ಶ್ರೀಗಳು ನಮ್ಮನ್ನು ಆಗಲಿರಬಹುದು. ಆದರೆ, ಅವರ ಆದರ್ಶಗಳು ನಮಗೆಲ್ಲ ಪ್ರೇರಣೆ, ನಿಸರ್ಗದಲ್ಲಿ ದೇವರನ್ನು ಕಾಣಿ ಎಂದು ಸರಳ ಬದುಕು ಸಾಗಿಸಿದ ಮಹಾನ್ ತತ್ವಜ್ಞಾನಿ. ಇವರ ಆದರ್ಶಗಳ ದಾರಿಯಲ್ಲಿ ನಡೆಯೋಣ ಎಂದು ಇಂಡಿ ಶಾಸಕರಾದ ಮಾನ್ಯ ಶ್ರೀ ಯಶವಂತರಾಯಗೌಡ ವ್ಹಿ.ಪಾಟೀಲ ಹೇಳಿದರು.
ಶಿರಶ್ಯಾಡ ಶ್ರೀಮಠದ ಮರುಗೇಂದ್ರ ಶಿವಾರ್ಚಾರರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪುರಸಭೆ ಅಧ್ಯಕ್ಷತೆ ಬನ್ನಮ್ಮ ಹದರಿ, ಶಾಂತೇಶ್ವರ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ, ನೀಲಕಂಠಗೌಡ ಪಾಟೀಲ, ಪ್ರಜಾಪಿತ ಬ್ರಹ್ಮಕುಮಾರಿ ವಿದ್ಯಾಪೀಠದ ರಾಜಯೋಗಿನಿ ಯಮುನಾ ಅಕ್ಕನವರು, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಪ್ರೇಮಾ ಪಾಟೀಲ, ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರಿ ಸೇರಿದಂತೆ ಗಣ್ಯರು ಇದ್ದರು.