ವೀರ ಯೋಧ ಕಾಶೀರಾಯ ಬೊಮ್ಮನಹಳ್ಳಿಯವರು ಕಳೆದ ವರ್ಷ ಹುತಾತ್ಮರಾಗಿದ್ದರು. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದ ವೀರರಾಗಿದ್ದು ಅವರ ಪುತ್ಥಳಿಯನ್ನು ಸ್ಥಾಪಿಸುವ ಅಪೇಕ್ಷೆಯನ್ನು ಗ್ರಾಮದ ಹಿರಿಯರು ವ್ಯಕ್ತಪಡಿಸಿದ್ದರು. ಅದರಂತೆ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಅವರ ಕಾರ್ಯಾಲಯದ ಆಪ್ತಸಹಾಯಕ ಸಿಬ್ಬಂದಿಗಳು ಉಕ್ಕಲಿ ಗ್ರಾಮಕ್ಕೆ ತೆರಳಿ ರೂ.2ಲಕ್ಷವನ್ನು ಗ್ರಾಮದ ಹಿರಿಯರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಕ್ಕಲಿ ಗ್ರಾಮದ ಹಿರಿಯರಾದ ಅಣ್ಣಾಸಾಹೇಬಗೌಡ ಪಾಟೀಲ ಸೇರಿದಂತೆ, ಗ್ರಾಮದ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.
ವರದಿ: ಲಾಲಸಾಬ ಸವಾರಗೋಳ I Today News ವಿಜಯಪುರ