ಬಿಜೆಪಿ ಯುವ ನಾಯಕ ಪ್ರವೀಣ ನೆಟ್ಟಾರು ಹತ್ಯೆಯ ತನಿಖೆ ಪ್ರಗತಿಯಲ್ಲಿದೆ. ಮೇಲ್ನೋಟಕ್ಕೆ ಹತ್ಯಗೆ 2-3 ಕಾರಣಗಳು ಕಂಡುಬರುತ್ತಿದೆ ಈಗಾಗಲೇ ಸುಮಾರು 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸುಳ್ಯದ ಬಳ್ಳಾರಿಯಲ್ಲಿ ಮಾತನಾಡಿದ ಅವರು ತನಿಖೆಗಾಗಿ ತಂಡಗಳನ್ನು ರಚಿಸಲಾಗಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಆರೋಪಿಗಳ ಬಂಧನದ ಬಳಿಕ ಖಚಿತ ಮಾಹಿತಿಯನ್ನು ನೀಡುತ್ತೇವೆ ಎಂದು ಎಡಿಜಿಪಿ ತಿಳಿಸಿದ್ದಾರೆ. ಹಂತಕರು ಕೇರಳದಿಂದ ಬಂದಿರುವ ಶಂಕೆ ಇದೆ ಎಂದು ನಿನ್ನೆ ಗೃಹ ಸಚಿವರು ಹೇಳಿದ್ದರು ಆದರೆ ಈ ಬಗ್ಗೆ ಮಾಹಿತಿ ನೀಡಲು ಎಡಿಜಿಪಿ ನಿರಾಕರಿಸಿದ್ದಾರೆ.