ಗುಜರಾತ್ ವಿಧಾನಸಭೆಯಲ್ಲಿ ಜನತೆ ಮತ್ತೊಮ್ಮೆ ಬಿಜೆಪಿಗೆ ಕಿರೀಟ ತೊಡಿಸಿದ್ದಾರೆ. ಇದರೊಂದಿಗೆ ಬಿಜೆಪಿ ಸತತ ಏಳನೇ ಬಾರಿಗೆ ಅಧಿಕಾರಕ್ಕೆ ಬಂದಿದೆ.ರಾಜ್ಯದ 182 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 156 ಸ್ಥಾನಗಳನ್ನು ಗೆದ್ದಿದೆ. ಒಟ್ಟಾರೆ ದಾಖಲಾದ ಮತಗಳಲ್ಲಿ ಶೇ.53ಕ್ಕೂ ಹೆಚ್ಚು ಬಿಜೆಪಿ ಪಾಲಾಗಿರುವುದು ಗಮನಾರ್ಹ. ಆದರೆ, ರಾಜ್ಯದಲ್ಲಿ ನೋಟಾಗೆ ಭಾರಿ ಮತಗಳೂ ಬಿದ್ದಂತಿದೆ. ರಾಜ್ಯಾದ್ಯಂತ 5,01,202 ಮತದಾರರು ನೋಟಾಕ್ಕೆ ಮತ ಹಾಕಿದ್ದಾರೆ. ಇದು ಒಟ್ಟು ನೋಂದಾಯಿತ ಮತದಾನದ ಶೇಕಡಾ 1.5 ರಷ್ಟಿದೆ. ಆದರೆ, 2012ರ ಚುನಾವಣೆಯಲ್ಲಿ ನೋಟಾ 5,51,594 ಮತಗಳನ್ನು ಪಡೆದಿತ್ತು. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ನೋಟಾ ಶೇಕಡವಾರು ಸ್ವಲ್ಪ ಕಡಿಮೆಯಾಗಿದೆ.