ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕೂಡಗಿ ಗ್ರಾ.ಪಂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ರಾಜನಬಿ.ದ ಮೋಮೀನ್ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಹಿಂದಿನ ಉಪಾಧ್ಯಕ್ಷ ಶ್ರೀಮತಿ ದ್ಯಾಮವ್ವ ತೋಲಮಟ್ಟಿ ಇವರು ಹದಿನೈದು ತಿಂಗಳು ಆಡಳಿತ ಮಾಡಿ ಇನ್ನು ಹದಿನೈದು ತಿಂಗಳು ಬೇರೆಯವರಿಗೆ ಬಿಟ್ಟು ಕೊಟ್ಟರು.
ಒಟ್ಟು 20 ಸದಸ್ಯರನ್ನು ಹೊಂದಿರುವ ಕೂಡಗಿ ಗ್ರಾ.ಪಂ ನಲ್ಲಿ 19 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು ಒಬ್ಬ ಸದಸ್ಯರು ಗೈರಾಗಿದ್ದರು, ಹಾಜರಿದ್ದ 19 ಸದಸ್ಯರು ರಾಜನಬಿ ಮೋಮಿನ್ ಪರ ಮತ ಚಲಾಯಿಸಿದರು.
ವಿರುದ್ಧವಾಗಿ ಯಾರು ಸ್ಪರ್ಧಿಸದ ಕಾರಣ ಚುನಾವಣಾ ಅಧಿಕಾರಿ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಎಸ್ ಪಠಾಣ ರಾಜನಬಿ ಮೋಮಿನ್ ಅವರನ್ನು ಉಪಾಧ್ಯಕ್ಷ ಸ್ಥಾನದ ವಿಜೇತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರು.
ರಾಜನಬಿ ಮೋಮಿನ್ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಶೇಕಾಬಾಯಿ.ರಾಠೋಡ (ಅಧ್ಯಕ್ಷರು) ದ್ಯಾಮವ್ವ. ತೋಳಮಟ್ಟಿ (ಉಪಾಧ್ಯಕ್ಷರು) ಪರಶುರಾಮ. ಕುಬಕಡ್ಡಿ ಸದಸ್ಯರು ಜಾವಿಧ. ಗಡೇದ.ಶ್ರೀ ನಬೀಸಾಬ.ಬಿರಾದಾರ. ಶ್ರೀಮತಿ.ಹುಸೇನಬಿ.ಮಾಶ್ಯಾಳ. ಶ್ರೀ ಶರಣಪ್ಪ. ದೊಡಮನಿ. ಶ್ರೀಮತಿ ಕಾಶೀಬಾಯಿ.ಉಳ್ಳಾಗಡ್ಡಿ. ಶ್ರೀ ಬಸವರಾಜ. ಮಠ. ಶ್ರೀ ಶ್ರೀಶೈಲ. ತಳೇವಾಡ. ಶ್ರೀಮತಿ ಪ್ರೇಮಾ. ಮಾದರ. ಶ್ರೀಮತಿ ಶಿವಣ್ಣ .ಬೇವೂರ. ಶ್ರೀಮತಿ ರಾಜನಬಿ .ಮೊಮಿನ. ಶ್ರೀ ಮಹ್ಮಧ ಆರಿಫ್. . ತಾಳಿಕೋಟಿ. ಶ್ರೀಮತಿ ನೀಲವ್ವ .ಮಾದರ. ಶ್ರೀಮತಿ ಸಾವಿತ್ರಿ ಬಂಡ್ಡಿವಡ್ಡರ. ಶ್ರೀ ರಜಾಕ ಕೊಳ್ಳಿ, ಭರಮಣ್ಣ ಬಿದರಿ. ಶ್ರೀ ಈರಪ್ಪ .ಮನಗೂಳಿ. ಶ್ರೀ ಅರುಣ .ನಾಯಕ. ಶ್ರೀಮತಿ ಸವಿತಾ .ಚವ್ಹಾಣ. ಶ್ರೀ ಮಲ್ಲಪ್ಪ .ಮಿಣಜಗಿ. ಉಪಸ್ಥಿತರಿದ್ದರು.
ವರದಿ: ಲಾಲಸಾಬ ಸವಾರಗೋಳ I Today News ವಿಜಯಪುರ