ನನ್ನ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ನನ್ನ ಗುರಿಯಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ್ ಹೇಳಿದರು.
ಕೋಲ್ದಾರ ಪಟ್ಟಣದ 12 ನೇಯ ವಾರ್ಡಿನಲ್ಲಿ ನಡೆದ ಸಮುದಾಯ ಭವನದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ನಂಜುಂಡಪ್ಪನವರ ವರದಿಯ ಅನ್ವಯ ಬಸವನಬಾಗೇವಾಡಿ ತಾಲ್ಲೂಕು ಅತ್ಯಂತ ಹಿಂದುಳಿದ ತಾಲೂಕು ಎಂದು ಉಲ್ಲೇಖಿಸಲಾಗಿತ್ತು.
ನಾನು ಈ ಕ್ಷೇತ್ರಕ್ಕೆ ಶಾಸಕನಾಗಿ ಬಂದ ಮೇಲೆ ಸಾಕಷ್ಟು ಅನುದಾನ ತರುವ ಮೂಲಕ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ
ಪ್ರಸ್ತುತವಾಗಿ ಬಸವನಬಾಗೇವಾಡಿ ಮತಕ್ಷೇತ್ರ ಅತ್ಯಂತ ಮುಂದುವರೆದ ತಾಲ್ಲೂಕಾಗಿ ಪರಿವರ್ತನೆ ಆಗಿದೆ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದರು.
ಚುನಾವಣೆ ಬಂದಾಗ ರಾಜಕೀಯ ಮಾಡೋಣ ಅಭಿವೃದ್ಧಿ ವಿಷಯ ಬಂದಾಗ ಕೆಲಸಗಳನ್ನು ಮಾಡಲು ಬಿಡಿ. ಮಾಡುವ ಕೆಲಸಗಳಿಗೆ ಅಡ್ಡಗಾಲು ಹಾಕದೇ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ ಬಂದಂತಹ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಸಿ.ಎಸ್ ಗಿಡ್ಡಪ್ಪಗೋಳ, ಮುಖಂಡರಾದ ಮಾಜಿ ಜಿ.ಪಂ ಸದಸ್ಯ ಕಲ್ಲು ದೇಸಾಯಿ, ಎಸ್.ಬಿ ಪತಂಗಿ, ತಾನಾಜಿ ನಾಗರಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ, ಸಿ.ಎಂ ಗಣಕುಮಾರ, ಚಂದ್ರಶೇಖರ್ ಹಿರೇಮಠ, ಶ್ರೀಶೈಲ್ ಗೌಡರ ಹಾಗೂ ಇತರರು ಇದ್ದರು.
ಬ್ಯೂರೋ ರಿಪೋರ್ಟ್: ಲಾಲಸಾಬ ಸವಾರಗೋಳ I Today News ವಿಜಯಪುರ