GSLV-F12 ಮೂಲಕ ಮತ್ತೊಂದು ರಾಕೆಟ್ ಉಡಾವಣೆಗೆ ಇಸ್ರೋ ಸಜ್ಜಾಗಿದೆ.ಇಂದು (ಸೋಮವಾರ) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನ್ಯಾವಿಗೇಷನ್ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ. ಈ ಪ್ರಯೋಗದ ಮೂಲಕ ಭಾರತದ ನ್ಯಾವಿಗೇಷನ್ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ. ನ್ಯಾವಿಗೇಷನ್ ಸೇವೆಗಳಿಗಾಗಿ ಈ ಹಿಂದೆ ಕಳುಹಿಸಲಾದ 4 ಉಪಗ್ರಹಗಳು ತಮ್ಮಕಾರ್ಯಾವಧಿಯ ಅಂತ್ಯವನ್ನು ತಲುಪಿವೆ. ಹಾಗಾಗಿ, ಅವುಗಳಿಗೆ ಪರ್ಯಾಯವಾಗಿ ಪ್ರತಿ 6 ತಿಂಗಳಿಗೊಮ್ಮೆ ಒಂದು ಉಪಗ್ರಹವನ್ನು ಕಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ತಿಳಿಸಿದ್ದಾರೆ.