ಪಕ್ಷಕ್ಕೆ ಡ್ಯಾಮೇಜ್ ಮಾಡುವ ಹೇಳಿಕೆ ನೀಡಿದ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ದ ಆಧಾರ ರಹಿತ ಆರೋಪ ಮಾಡಿರುವ ವಿಚಾರದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಬಿಜೆಪಿ ಹೈಕಮಾಂಡ್ ನೋಟಿಸ್ ಜಾರಿ ಮಾಡಿದೆ. ಈ ಕುರಿತು ಸ್ಪಷ್ಟಪಡಿಸಿರುವ ಬಿಜೆಪಿ ರಾಜ್ಯಉಸ್ತುವಾರಿ ಅರುಣ್ ಸಿಂಗ್ ಯತ್ನಾಳ ಹೈಕಮಾಂಡ್ ನೋಟಿಸಗೆ 7 ದಿನಗಳಲ್ಲಿ ಉತ್ತರ ನೀಡಬೇಕಿದ. ಜೊತೆಗೆ ಸರ್ಕಾರದ ವಿರುದ್ದ ಹಾಗೂ ಪಕ್ಷದ ಹಿರಿಯ ನಾಯಕರ ಬಗ್ಗೆ ಮಾತನಾಡದಂತೆ ವಾರ್ನಿಂಗ್ ನೀಡಲಾಗಿದೆ ಎಂದಿದ್ದಾರೆ.