ಧಾರವಾಡದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, ಇತ್ತೀಚೆಗೆ ರಿಲೀಸ್ ಆಗಿರುವ ಪಠಾಣ್ ಸಿನೆಮಾದ `ಬೇಷರಂ ರಂಗ್’ ಹಾಡಿನ ನೃತ್ಯ ಅಶ್ಲೀಲ ಹಾಗೂ ಅಸಭ್ಯವಾಗಿದೆ, ಇದು ನಾಚಿಗೇಡಾಗುವಂತಹದ್ದು ಎಂದು ಕಿಡಿ ಕಾರಿದ್ದಾರೆ.ದೇಶಾದ್ಯಂತ ಪಠಾಣ್ ಸಿನಿಮಾ ಹಾಡಿಗೆ ಬೈಕಾಟ್ ಅಭಿಯಾನ ಆರಂಭಿಸಿದ್ದು, ಶ್ರೀರಾಮಸೇನೆ (Sriramsena) ಸಹ ಬೈಕಾಟ್ಗೆ ಬೆಂಬಲ ವ್ಯಕ್ತಪಡಿಸಿದೆ. ಹಿಂದಿ ಚಿತ್ರರಂಗ ಮುಂಬೈನ ದಾವುದ್ ಕೈಯಲ್ಲಿದೆ. ಕಮ್ಯುನಿಸ್ಟರು ಹಾಗೂ ನಾಸ್ತಿಕವಾದಿಗಳ ಹಿಡಿತದಲ್ಲಿದೆ. ಇಲ್ಲಿವರೆಗೂ ಹಿಂದೂಗಳನ್ನೇ ಟಾರ್ಗೆಟ್ ಮಾಡಿ, ನಂಬಿಕೆಗಳನ್ನು ಕೆಡಿಸುವ ಪ್ರವೃತ್ತಿ ಬೆಳೆದುಬಂದಿದೆ.ಪಠಾಣ್ ಸಿನಿಮಾದಲ್ಲೂ ಕೇಸರಿ (Saffron) ಬಣ್ಣವನ್ನು ಟಾರ್ಗಟ್ ಮಾಡಿ ಬೇಷರಂ ರಂಗ್ ಹಾಡಿನಲ್ಲಿ ಈ ಬಣ್ಣ ತರಲಾಗಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.