ಗ್ರಾ. ಪಂ. ಪಿಡಿಓ ಹಾಗೂ ಇಂಜಿನಿಯರ್ ಲಂಚ ಪಡೆಯುವಾಗ ವಿಜಯಪುರ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಹಣದ ಸಮೇತ ಇಬ್ಬರನ್ನು ಬಂಧಿಸಿದ ಘಟನೆ ನಡೆದಿದೆ. ಉದ್ಯೋಗ ಖಾತ್ರಿ ಕಾಮಗಾರಿಯಡಿ ನಿರ್ಮಿಸಿದ ಗ್ರಾ. ಪಂ. ಕಾಂಪೌಂಡ್ ಕಾಮಗಾರಿಯ ಹಣ ಬಿಡುಗಡೆಗೆ ಲಂಚ ಕೇಳಿದ್ದ ತಂಗಡಗಿ ಗ್ರಾ. ಪಂ. ಪಿಡಿಓ ಬಸವರಾಜ ತಾಳಿಕೋಟಿ, ಇಂಜಿನಿಯರ್ ಪ್ರಸನ್ನಕುಮಾರ ಶೆಟ್ಟರ್ ಅವರು 30 ಸಾವಿರ ರೂ. ಲಂಚ ಕೇಳಿದ್ದರು. ಕಚೇರಿಯ ಉದ್ಯೋಗ ಖಾತ್ರಿ ವಿಭಾಗದ ಕೊಠಡಿಯಲ್ಲಿ ಲಂಚದ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ.