ಇಂಡಿ.ಸಿಂದಗಿ ರಸ್ತೆಯ ಪದವಿ ಕಾಲೇಜಿನ ಪಕ್ಕದಲ್ಲಿ ಹಳೇ ಸಾಲೋಟಗಿ ರಸ್ತೆ ವಾರ್ಡ್ ನಂಬರ್ 12ರಲ್ಲಿ,ಇಂಡಿ ನಗರದಲ್ಲಿ ವಿಶೇಷವಾಗಿ ಮಲೆನಾಡಿನ ಶೈಲಿಯ ಹಂಚಿನ ಮೇಲ್ಚಾವಣಿಯನ್ನು ಹೂಂದಿದ, ಪ್ರತ್ಯೇಕವಾಗಿ ನಾಗದೇವರ ದೇವಾಲಯ ನಿರ್ಮಾಣಗೋಂಡಿದ್ದು.ಇದು ಮೂರನೇ ವರ್ಷದ ಜಾತ್ರಾ ಮಹೋತ್ಸವ.ಪ್ರತಿವರ್ಷದಂತೆ ಈ ವರ್ಷವೂ ನಾಗರಪಂಚಮಿಯ ದಿನದಂದು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಆದಿಶೇಷನಿಗೆ ಮಹಾ ಅಭಿಷೇಕ ,ನಂತರ ಹೋಮ್ ಹವನ,ನಂತರ ಬೆಳ್ಳಿಗೆ 7 ಗಂಟೆ ಯಿಂದ ಸುಮಂಗಲಿಯರಿಂದ ನಾಗದೇವರಿಗೆ ಹಾಲೇರಿಯುವ ಕಾರ್ಯಕ್ರಮ ನಡೆಯುವುದು.ಬಂದ ಭಕ್ತರಿಗೆ ಅನ್ನ ಪ್ರಸಾದ ವಿತರಣೆ, ಸಾಯಂಕಾಲ ಭಜನಾ ಮಂಡಳಿಯಿಂದ ಗಾನಸುಧೆ ನಡೆಯುವುದು.ನಗರದ ಸದ್ಬಕರು ಈ ಪೂಣ್ಯಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾಗಬೇಕಾಗಿ, ಶ್ರೀ ಆದಿಶೇಷ ದೇವಸ್ಥಾನ ಜಾತ್ರಾ ಮಹೋತ್ಸವದ ಕಮೀಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.