ವಿಕಲಚೇತನರಲ್ಲಿ ಅದ್ಭುತ್ ಚೇತನವಿರುತ್ತದೆ.ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು.ಶಾಸಕರ ಅನುದಾನದಲ್ಲಿ ತ್ರಿಚಕ್ರ ವಾಹನ ಒದಗಿಸಿಕೊಡಬೇಕೆಂಬ ಉದ್ದೇಶದಿಂದ 2 ವರ್ಷ ಅವರಿಗಾಗಿ ಮೀಸಲಿರಿಸಿದ 40 ಲಕ್ಷಗಳಲ್ಲಿ 55 ತ್ರಿಚಕ್ರ ವಾಹನವನ್ನು ಬರುವ ಗಣರಾಜ್ಯೋತ್ಸದಂದು ವಿತರಣೆ ಮಾಡಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಇಂಡಿ ಪಟ್ಟಣದ ಖೇಡ ಕಾಲೇಜು ಆವರಣದಲ್ಲಿ ಶನಿವಾರ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ತಾಲೂಕು ಘಟಕ ಇಂಡಿ ಹಾಗೂ ಬಿಜಾಪುರ ಜಿಲ್ಲಾ ಅಂಗವಿಕಲಕರ ಕ್ಷೇಮಾಭಿವೃದ್ಧಿ ಸಂಘ, ಎಂಆರ್‌ಡಬ್ಲ್ಯು, ವಿಆರ್‌ಡಬ್ಲ್ಯು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ವಿಕಲಚೇತನರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತನರು ಆತ್ಮಸ್ಥೆರ್ಯದಿಂದ ಬದುಕು ಸಾಗಿಸುತ್ತಿದ್ದಾರೆ. ಸಮಾಜದಲ್ಲಿ ಸ್ವಾವಲಂಬಿಗಳಾಗಿ ಸದೃಢವಾಗಿ ಜೀವನ ನಡೆಸುವಂತೆ ಅವರಿಗೆ ಸ್ಫೂರ್ತಿ ತುಂಬಬೇಕು. ಅಂಗವೈಕಲ್ಯ ಮೆಟ್ಟಿ ನಿಲ್ಲಬೇಕು. ಹೃದಯಶ್ರೀಮಂತಿಕೆ ಇರುವವರು ವಿಕಲಚೇತನರಲ್ಲಿ,ಸಾಮಾನ್ಯರಿಗಿಂತ ವಿಕಲಚೇತನರು ವಿಶ್ವಮಟ್ಟದಲ್ಲಿ ಅಸಮಾನ್ಯ ಸಾಧನೆ ಮಾಡಿದ ಉದಾಹರಣೆಗಳಿವೆ. ವಿಶ್ವದ ಶ್ರೇಷ್ಠ ವಿಜ್ಞಾನಿ ಐನ್‌ಸ್ಟಿನ್ ಅವರು ಕೂಡಒಬ್ಬವಿಕಲಚೇತನರು. ಪ್ರತಿಯೊಬ್ಬರು ಅರ್ಥಪೂರ್ಣ ಮತ್ತು ಪರಿಪೂರ್ಣ ಬದುಕು ನಡೆಸಬೇಕು.ಬೌದ್ಧಿಕ ಹಾಗೂ ಭಾವನಾತ್ಮಕ ಬೆಸೆಯುವ ಕೆಲಸವಾಗಬೇಕು. ವಿಕಲತೆ ಶರೀರಕ್ಕೆ ಹೊರತು ಮನಸ್ಸಿಗಲ್ಲ.ಎಲ್ಲರಂತೆ ವಿಕಲಚೇತನರು ಸರಿಸಮಾನರು ಎಂದರು.