ಇಂಡಿ: ಇಂಡಿ ಪ್ರತ್ಯೇಕ ಜಿಲ್ಲೆ ಘೋಷಣೆಗೆ ಆಗ್ರಹಿಸಿ ಪಟ್ಟಣದ ಬುಶ್ರಾ ಲಿಬ್ರಲ್ ಎಡೋಕೇಶನ ಅಸೋಸೀಯಶನ ಇಂಡಿ (ರಿ) ಇವರ ವತಿಯಿಂದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷರಾದ ಹಸನ ಮುಜಾರ ಮಾತನಾಡಿ, ಜಿಲ್ಲಾ ಕೇಂದ್ರಕ್ಕೆ ಯೋಗ್ಯವಾದ ಭೌಗೋಳಿಕ ಪ್ರದೇಶ ಮತ್ತು ಸರಕಾರಿ ಕಚೇರಿಗಳನ್ನು ಹೊಂದಿರುವ ಇಂಡಿಯನ್ನು ಜಿಲ್ಲೆಯಾಗಿಸಬೇಕು. ರಾಜ್ಯ ಗಡಿ ಭಾಗದ ವಿಜಯಪುರ ಜಿಲ್ಲೆಯ ಇಂಡಿಯು ಅತಿ ಹಿಂದುಳಿದ ಪ್ರದೇಶಗಲ್ಲಿ ಇದು ಕೂಡಾ ಒಂದಾಗಿದೆ. ಅಲ್ಲದೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದೆ. ಆದರೆ ಇಂಡಿಯು ಆಡಳಿತಾತ್ಮಕವಾಗಿ ಪ್ರಗತಿ ಹೊಂದಬೇಕಾದರೆ ಜಿಲ್ಲೆ ಮಾಡಿದಾಗ ಮಾತ್ರ ಸಾಧ್ಯ ಎಂದರು.
ಇಮ್ರಾನ ಮುಜಾವರ, ಅಬ್ಬಾಸ್ ದೇಸಾಯಿ ಮಾತನಾಡಿ, ಅಭಿವೃದ್ಧಿ ದೃಷ್ಠಿಯಿಂದ ಇಂಡಿಗೆ ಪ್ರತ್ಯೇಕ ಜಿಲ್ಲೆ ಸ್ಥಾನಮಾನ ನೀಡಬೇಕು. ಈ ಭಾಗದ ಬಹುದಿನದ ಜಿಲ್ಲಾ ಬೇಡಿಕೆಗೆ ಸರಕಾರ ಸ್ಪಂದಿಸಬೇಕು ಎಂದರು. ಈಗಾಗಲೆ ಜಿಲ್ಲೆಗೆ ಇರಬೇಕಾದ ಪೂರಕ ಅಂಶಗಳು ಸಾಕಷ್ಟು ಇಲ್ಲಿ ಲಭ್ಯವಿದ್ದು ಆದ್ದರಿಂದ ರಾಜ್ಯದ ಮುಖ್ಯಮಂತ್ರಿಗಳು ಇಂಡಿ ಪ್ರತೇಕ ಜಿಲ್ಲೆ ರಚನೆ ಮಾಡಿ ಘೋಷಣೆ ಮಾಡಬೇಕು. ಮುಂದುವರೆದು ಸಂವಿಧಾನದ ವಿಧಿ 371 (ಜೆ) ಗೆ ಅಖಂಡ ಇಂಡಿ ಮತ್ತು ಸಿಂದಗಿ ತಾಲೂಕು ಸೇರ್ಪಡೆಗೆ ಹಕ್ಕೋತ್ತಾಯ ಮಾಡುವ ಮೂಲಕ ತಮ್ಮಲ್ಲಿ ವಿನಂತಿಯಿಂದ ಮನವಿ ಮಾಡಿಕೊಳ್ಳುತ್ತೆವೆ ಎಂದರು.
ಇದೇ ಸಂದರ್ಭದಲ್ಲಿ ರಂಜಾನ ಇಂಡಿಕರ, ಶಹಿನಶಾ ಜಾಗೀರದಾರ, ಅಕೀಲ ಪಟೇಲ, ಮುಸ್ತಾಕ ಇಂಡಿಕರ, ಯಾಸೀನ ಟಾಮಟಗಾರ, ಸರಫರಾಜ ಬಾಗವಾನ, ಮೌಶೀನ ಬಾಗವಾನ, ರಫೀಕ ಅರಬ, ಜೈದ ಗೌರ, ಜಾಬೀರ ಲಶಕೇರಿ, ಎಂ.ಡಿ. ಕೈಫ್ ಇದ್ದರು.