ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿರೋ ಧರ್ಮಗುರು ಸಿಎಂ ಜೊತೆಗೆ ವೇದಿಕೆ ಹಂಚಿ ಕೊಂಡಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ. ವಿಜಯಪುರ ನಗರದ ಮುಸ್ಲಿಂ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ನೀರ್ ಪೀರಾ ಹಾಸ್ಮಿ ವಿರುದ್ಧ ಶಾಸಕ ಯತ್ನಾಳ ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ರೌಡಿಶೀಟರ್ ಹೈದರ್ ನದಾಫ್ ಕೊಲೆ ಪ್ರಕರಣಗಳಲ್ಲಿ ಧರ್ಮಗುರು ಆರೋಪಿಯಾಗಿದ್ದರು ಎಂದು ಆರೋಪಿಸಿದ್ದಾರೆ.