ಶ್ರೀ ಭಾಗ್ಯಾವಂತಿ ಶಿಕ್ಷಣ ಸಂಸ್ಥೆಗಳ ಸಮೂಹದ ಶ್ರೀ ಭಾಗ್ಯವಂತಿ ಹಿರಿಯ ಪ್ರಾಥಮಿಕ ಶಾಲೆ, ಆಂಗ್ಲ ಮಾಧ್ಯಮ ಪಬ್ಲಿಕ್ ಸ್ಕೂಲ್, ಹೈ ಸ್ಕೂಲ್, ಪದವಿ ಪೂರ್ವ ಕಾಲೇಜು ಇವುಗಳ ಆಶ್ರಯದಲ್ಲಿ ದಿನಾಂಕ 13/08/2022 ಶನಿವಾರ ಬೆಳಗ್ಗೆ 9-30 ರಿಂದ 11-30ರ ವರೆಗೆ ಇಂಡಿ ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು 800 ವಿಧ್ಯಾರ್ಥಿ ವಿದ್ಯಾರ್ಥಿನಿಯರು ಪ್ರಭಾತ್ ಫೇರಿ ಜಾಥಾ ಮಾಡಿ ಭಾರತದ ಸ್ವಾತಂತ್ರ್ಯ ಕ್ಕೆ 75 ವರ್ಷಗಳ ಅಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ನಾಗರಿಕರೆಲ್ಲರು ತಮ್ಮ ಮನೆಗಳ ಮೇಲೆ 3 ದಿನಗಳವರೆಗೆ ತ್ರಿವರ್ಣ ಧ್ವಜ ಅನಾವರಣ ಮಾಡಲು ಘೋಷ ವಾಕ್ಯ ಗಳನ್ನು ಕೂಗುತ್ತಾ ಅಂಬೇಡ್ಕರ್ ಸರ್ಕಲ್ ದಿಂದ ಬಸವೇಶ್ವರ ವೃತ್ತ, ಮಿನಿ ವಿಧಾನಸೌಧ, ಸರಕಾರಿ ಆಸ್ಪತ್ರೆ, ಮಹಾವೀರ ವೃತ್ತ, ಶಿವಾಜಿ ಸರ್ಕಲ್ ದವರೆಗೂ ನಡೆದುಕೊಂಡು ಹರ್ ಘರ್ ಘರ್ ತಿರಂಗಾ ಅಭಿಯಾನ ಮುಗಿಸಿದರು.
ಈ ಅಭಿಯಾನಕ್ಕೆ ಇಂಡಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಿ ಯು ರಾಠೋಡ, ಇಂಡಿ ಪೊಲೀಸ್ ಸರ್ಕಲ್ ಇನಸ್ಪೆಕ್ಟರ್ ರಾದ ಬಿರಾದರ್, ಹಾಗೂ ಕಾಸುಗೌಡ ಬಿರಾದರ್, ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಶಾಂತಪ್ಪ ದಶವಂತ, ಆಪ್ಪಾರಯ ದಷವಂತ, ಕಾರ್ಯದರ್ಶಿಗಳಾದ ಶಿವಾನಂದ ದಷವಂತ, ಪ್ರಾಚಾರ್ಯರಾದ ಸಿ ಎಸ್ ದಷವಂತ, ಮುಖ್ಯೋಪಾಧ್ಯಾಯರಾದ ಶ್ರೀ ಎ. ಎಸ್ ಬೋರಾಮಣಿ, ಎಚ್. ಎಸ್ ಹಳೆಮನೆ, ಸಂತೋಷ ಹಿರೇಮಠ್, ಶಿಲ್ಪಾ ದಷವಂತ, ರಾಜೇಶ್ ಎಂ, ಸಂಜು ದಷವಂತ, ಮಲ್ಲು ಗುಡ್ಲ ಶ್ರೀಮತಿ ವಿಜಯಲಕಷ್ಮಿ ರೋಗಿಮಠ, ಉಪನ್ಯಾಸಕರು, ಶಿಕ್ಷಕರು, ಮಕ್ಕಳು ಹಾಗೂ ಅಪಾರ ಸಂಖ್ಯೆಯ ನಗರದ ನಿವಾಸಿಗಳು ಭಾಗವಹಿಸಿದರು.