ಇಂದು ಇಂಡಿ ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ ,ಹಾಗೂ ಶ್ರೀ ಹಡಪದ ಅಪ್ಪಣ್ಣ ಪ್ರಾಥಮಿಕ ಹಾಗೂ ಪ್ರೌಢಶಾಲೆ,ಇಂಡಿ ಇವರ ಸಹಯೋಗದಲ್ಲಿ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋಸ್ತವ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಮಾನ್ಯ ಶ್ರೀ ಯಶವಂತರಾಯಗೌಡ ವ್ಹಿ ಪಾಟೀಲ ರವರು ನೆರವೇರಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಯೊಂದೂ ಮಗುವಿನಲ್ಲಿಯೂ ಕೂಡ ಭಿನ್ನ, ವಿಭಿನ್ನ ಪ್ರತಿಭೆ, ಸಾಮರ್ಥ್ಯ ಅಡಗಿರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸಿ, ಸೂಕ್ತ ವೇದಿಕೆ ಕಲ್ಪಿಸಬೇಕಿದೆ. ನಮ್ಮ ಮಕ್ಕಳು ಶಿಕ್ಷಣದ ಜತೆಗೆ ದೇಶದ ಇತಿಹಾಸವನ್ನೂ ಅರಿಯಬೇಕು, ಭವಿಷ್ಯದಲ್ಲಿ ವೃತ್ತಿ ಆಯ್ಕೆಯ ಚಿಂತನೆಯೊಂದಿಗೆ ಸಮರ್ಥವಾಗಿ ದೇಶ ಮುನ್ನಡೆಸಲು ಯೋಗದಾನವನ್ನು ನೀಡಬೇಕು, ಇತಿಹಾಸ ಅರಿಯದವ ಇತಿಹಾಸ ಸೃಷ್ಟಿಸಲಾರ. ಹಾಗಾಗಿ ಮೊದಲಿಗೆ ಮಕ್ಕಳಿಗೆ ದೇಶದ ಇತಿಹಾಸ, ಚರಿತ್ರೆ, ಸತ್ಪುರುಷರ ಜೀವನಾದರ್ಶಗಳ ಬಗೆಗೆ ತಿಳಿ ಹೇಳುವ ಅಗತ್ಯವಿದೆ ಎಂಬ ಮಾತುಗಳನ್ನು ಈ ಸಂದರ್ಭದಲ್ಲಿ ತಿಳಿಸಿ ಪುಟಾಣಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಸಮನ್ವಯಾದಿಕಾರಿಗಳು,ಪುರಸಭೆ ಅಧ್ಯಕ್ಷರು,ಸದಸ್ಯರು,ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.