ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಯೋಗಾಭ್ಯಾಸ ಆರಂಭವಾಗಿದೆ ಮೂರು ಬಾರಿ ಓಂಕಾರ ಉಚ್ಚಾರಣೆಯೊಂದಿಗೆ ವಿಶೇಷ ಯೋಗಾಭ್ಯಾಸಕ್ಕೆ ಚಾಲನೆ ನೀಡಲಾಯಿತು.
ಸಂಸ್ಕೃತದ ಶ್ಲೋಕವೊಂದರ ಮೂಲಕ ಪ್ರಾರ್ಥನೆ ಮಾಡಲಾಯಿತು ಮೊದಲು ಕುತ್ತಿಗೆ ಸಡಿಲಗೊಳಿಸುವ ಕುತ್ತಿಗೆ ತಿರುಗಿಸುವ ಮತ್ತು ಇತರ ಸರಳ ಉಸಿರಾಟದ ವ್ಯಾಯಾಮಗಳೊಂದಿಗೆ ಯೋಗಾಭ್ಯಾಸ ಆರಂಭವಾಯಿತು ಪ್ರಧಾನಿ ಮೋದಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಡಾ ಕೆ. ಸುಧಾಕರ್, ಸೇರಿದಂತೆ ಅನೇಕ ಗಣ್ಯರು ಜನರ ಮಧ್ಯೆಕುಳಿತು ಯೋಗ ಮಾಡುತ್ತಿದ್ದಾರೆ.