ಇಂಡಿ : ವಾಯವ್ಯಪದವೀಧರ ಕ್ಷತ್ರದ ಅಭ್ಯರ್ಥಿ ಸುನೀಲ್ ಸಂಕ್ ಮತ್ತು ಶಿಕ್ಷಕರು ಪ್ರತಿನಿಧಿಯಾಗಿರುವ ಪ್ರಕಾಶ್ ಹುಕ್ಕೇರಿ ಗೆಲ್ಲುವ ವಿಶ್ವಾಸವಿದೆ ಎಂದು ಇಂಡಿ ಶಾಸಕರಾದ ಯಶವಂತರಾಯಗೌಡ ವಿ ಪಾಟೀಲ ರವರು ಭರವಸೆ ವ್ಯಕ್ತಪಡಿಸಿದರು.ಇಂಡಿ ನಗರದ ಶಂಕರ್ ಪರ್ವತಿ ಕಾರ್ಯಾಲಯದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಇದೊಂದು ಅತ್ಯಂತ ಸೂಕ್ಷ್ಮ ಬುದ್ದಿವಂತರ ಚುನಾವಣೆಯಾಗಿದೆ ಸ್ವತಂತ್ರ ಸಿಕ್ಕನಂತರ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಯಲು ಅಭಿವೃದ್ದಿ ಕಾಣಲು ಕಾಂಗ್ರೆಸ್ ಸರ್ಕಾರ ರೂಪಿಸಿದ ಶಿಕ್ಷಣ ನೀತಿಗೆ ಕಾರಣವಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡುವುದರ ಜೊತೆಗೆ ಕ್ರಾಂತಿಯನ್ನು ಮಾಡಿದೆ ಸದ್ಯದೇಶ ಶಿಕ್ಷಣ ಕ್ಷೇತ್ರದಲ್ಲಿ ಇಷ್ಟೂಂದು ಮುಂದುವರೆಯಲು ಕಾಂಗ್ರೆಸ್ ಸ್ಪಷ್ಯ ನೀತಿ ಕಾರಣ ಎಂದರು. ಎಲ್ಲಾ ಕ್ಷೇತ್ರದಲ್ಲೂ ಅಪಾರ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಶಿಕ್ಷಕರು ಕ್ಷೇತ್ರದ ಅಭ್ಯರ್ಥಿ ಆಗಿರುವ ಪ್ರಕಾಶ್ ಹುಕ್ಕೇರಿ ಆಯ್ಕೆ ಮಾಡಲಾಗಿದ್ದು ಅವರ ಅನುಭವದ ಉಪಯೋಗ ಮಾಡಿಕೊಳ್ಳಬೇಕಿದೆ. ಬೆಳಗಾವಿಯಲ್ಲಿ ಭೀಮ್ಸ್ ಕಾಲೇಜು ಸ್ಥಾಪನೆ ಸೇರಿದಂತೆ ಪ್ರಕಾಶ್ ಹುಕ್ಕೇರಿ ಬೆಳಗಾವಿ ಜಿಲ್ಲೆಗೆ ಕೊಡುಗೆ ನೀಡಿದ್ದಾರೆ ಅವರು ಮಾಡಿದ ಕೆಲಸಗಳು ನಮಗೆ ಆದರ್ಶವಾಗಿವೆ ಎಂದು ತಿಳಿಸಿದರು.
ಈ ವೇಳೆ ಚಿಕ್ಕೋಡಿ ಸದಲಗಾ ಶಾಸಕರಾದ ಗಣೇಶ ಹುಕ್ಕೇರಿ ಎಐಸಿಸಿ ವಿಕ್ಷಕರಾದ ಕುಲದೀಪ್ ಶರ್ಮಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪ್ರೊ. ರಾಜು ಆಲಗೋರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಲಿಯಾಸ್ ಬೋರಾಮಣಿ ಮಹಿಳಾ ಬ್ಲಾಕ ಕಾಂಗ್ರೆಸ್ ಅಧ್ಯಕ್ಷರಾದ ನಿರ್ಮಲಾ ತಳಕೇರಿ ಹಿರಿಯ ಮುಖಂಡರುಗಳಾದ ಬಿ ಎಂ ಕೋರೆ ಜೆಟ್ಟೆಪ್ಪ ರವಳಿ ಭೀಮಣ್ಣ ಕೌಲಗಿ ಹಣಮಂತ ಖಂಡೇಕರ ಗುರಣ್ಣಗೌಡ ಪಾಟೀಲ ಸೇರಿದಂತೆ ಅನೇಕ ಗಣ್ಯರು ಇದ್ದರು.