ಪ್ರವಾದಿ ಮೊಹಮ್ಮದರನ್ನು ಅವಹೇಳನ ಮಾಡಿರುವ ಆರೋಪದ ಮೇಲೆ ಪಕ್ಷದಿಂದ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನುಪೂರ್ ಶರ್ಮಾ ಅವರಿಗೆ ಶೀಘ್ರದಲ್ಲಿ ಸಮನ್ಸ್ ಕಳುಹಿಸಲಾಗುವುದು ಎಂದು ಮುಂಬೈ ಪೊಲೀಸ್ ಮುಖ್ಯಸ್ಥ ಸಂಜಯ್ ಪಾಂಡೆ ತಿಳಿಸಿದ್ದಾರೆ.ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆಗಳಿಗೆ ಸಂಬಂಧಿಸಿದಂತೆ ನುಪೂರ್ ವಿರುದ್ಧ ನಗರ ಪೊಲೀಸ್ ಕಳೆದವಾರ ಎಫ್ಐಆರ್ ದಾಖಲಿಸಿದ್ದಾರೆ ಎಂದು ಸಂಜಯ್ ಪಾಂಡೆ ಹೇಳಿದ್ದಾರೆ.