ಪುರಸಭೆಯ ಮುಖ್ಯಾಧಿಕಾರಿ ಸರ್ವಾಧಿಕಾರದ ವರ್ತನೆ ಖಂಡಿಸಿ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಗುರುವಾರ ಪುರಸಭೆ ಎದುರು ಹಲಿಗೆ ಹೊಡೆಯುತ್ತಾ ಪ್ರತಿಭಟನೆ ನಡೆಸಿದರು. ಪುರಸಭೆ ಸದಸ್ಯರಾದ ಅನಿಲಗೌಡ ಬಿರಾದಾರ, ದೇವೇಂದ್ರ ಕುಂಬಾರ ಮಾತನಾಡಿ, ಪುರಸಭೆ ಸದಸ್ಯರ ಗಮನಕ್ಕೆ ತರದೆ ಬ್ಲೀಚಿಂಗ್ ಪೌಡರ್ ಖರೀದಿಸಲಾಗಿದೆ. ಸದಸ್ಯರ ವಾರ್ಡಗಳಲ್ಲಿ ವಿದ್ಯುತ್ ಬಲ್ಪ್ಗಳನ್ನು ಹಾಕಲು ಹೇಳಿದರೆ ಟೆಂಡರ್ ಆದ ನಂತರ ಬಲ್ಬ್ ಹಾಕುತ್ತೇವೆ ಎಂದು ಹೇಳುತ್ತಾರೆ. ಸಾರ್ವಜನಿಕರ ಮನೆ, ನಿವೇಶನದ ಉತಾರಿ ಪಡೆಯಲು ಬಂದರೆ ಅವರಿಗೆ ಇಲ್ಲದ ನೆಪ ಹೇಳಿ ಉತಾರಿ ನೀಡದೆ ಅವರೊಂದಿಗೆ ಅಗೌರವದಿಂದ ಮಾತನಾಡುತಿದ್ದು. ಪುರಸಭೆ ಸದಸ್ಯರಿಗೂ ಸಹ ಗೌರವಯುತವಾಗಿ ನಡೆದುಕೊಳ್ಳುತ್ತಿಲ್ಲ. ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ಈ ಮುಖ್ಯಾಧಿಕಾರಿ ನಮ್ಮ ಪಟ್ಟಣಕ್ಕೆ ಬೇಕಿಲ್ಲ. ಈ ಕೂಡಲೇ ಇವರನ್ನು ವರ್ಗಾವಣೆ ಮಾಡಬೇಕು. ಜಿಲ್ಲಾಧಿಕಾರಿಗಳು ಬಂದು ಪುರಸಭೆ ಮುಖ್ಯಾದಿಕಾರಿಯನ್ನು ವರ್ಗಾವಣೆ ಮಾಡುವವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ. ಮುಖ್ಯಾಧಿಕಾರಿಯನ್ನು ವರ್ಗಾವಣೆ ಮಾಡುವವರೆಗೂ ನಾವು ನಮ್ಮ ಪಟ್ಟು ಸಡಲಿಸುವುದಿಲ್ಲ ಎಂದು ತಿಳಿಸಿದರು.
ಬೆಳಗ್ಗೆ 11 ಗಂಟೆಯಿಂದಲೇ ಪ್ರತಿಭಟನೆ ಆರಂಭವಾಗಿದ್ದು, ಇನ್ನೂ ಪ್ರತಿಭಟನೆ ಮುಂದುವರೆದಿದೆ. ರಾತ್ರಿ ಇಡಿ ಧರಣಿ ನಡೆಸಲಾಗುವುದು ಎಂದು ಸದಸ್ಯರು ತಿಳಿಸಿದರು. ಪ್ರತಿಭಟನೆಯಲ್ಲಿ ಅನೀಲಗೌಡ ಬಿರಾದಾರ, ದೇವೇಂದ್ರ ಕುಂಬಾರ, ತಿಪ್ಪಣ ಉಟಗಿ, ಯಲ್ಲಪ್ಪ ಹದರಿ, ಇಸ್ಮಾಯಿಲ್ ಹರಬ್, ಸಿದ್ದರಾಮಪ್ಪ ದೇಸಾಯಿ, ಸೋಮುಗೌಡ ಬಿರಾದಾರ, ಹುಚ್ಚಪ್ಪ ಕಾಲೇಬಾಗ, ಅಸ್ಲಮ ಕಡನಿ, ಬುದ್ದುಗೌಡ ಪಾಟೀಲ್, ಶ್ರೀಶೈಲ ಪೂಜಾರಿ, ವಿಜು ಮೂರಮನ, ಪಿಟ್ಟು ರಾಠೋಡ, ಜಯರಾಮ ರಾಠೋಡ, ಅಶೋಕ ಅಕಲಾದಿ, ಬಾಳು ಮುಳಜಿ, ಸಂಜು ಪವಾರ, ಶಾಂತು ದನಶ್ರೀ, ರಾಮ ಹದಗಲ, ಮಲ್ಲು ಹದಗಲ, ವಜ್ರಕಾಂತ ಕೂಡಗಿನೂರ, ಉಷಾ ರಾಠೋಡ, ಮಚ್ಚೇಂದ್ರ ಕದಂ, ಮಂಜು ದೇವರ, ಆನಂದ ಬಡಿಗೇರ, ವಿಲಾಸ ಉಮರ್ಜಿ, ಮಲ್ಲು ಅಳ್ಳಗಿ, ಅಪ್ಪು ಪವಾರ ಸೇರಿದಂತೆ ಅನೇಕರು ಇದ್ದರು.ಇಂಡಿ ಪಟ್ಟಣದ ಪುರಸಭೆ ಎದುರುಗಡೆ ಸಾರ್ವಜನಿಕರು ಹಾಗೂ ಪುರಸಭೆ ಸದಸ್ಯರು ಪ್ರತಿಭಟನೆ ನಡೆಸಿದರು.