ಇಂಡಿ.ಹಂಜಗಿ ಗ್ರಾಮದ ಸುಮಾರು 200 ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸುಮಾರು 7 ಕೀಮಿ ಪಾದಯಾತ್ರೆ ಮೂಲಕ ಇಂಡಿ ಕೆ ಎಸ್.ಆರ್.ಟಿ.ಡಿಪೋ ಮುಂದೆ 1 ಘಂಟೆಕಾಲ ಮುಷ್ಕರ ಮಾಡಿ ಘಟಕ ವ್ಯಪಸ್ಥಕರಿಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾ ಸ್ಥಳಕ್ಕೆ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಬೆಟ್ಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ನಂತರ ಮಾತನಾಡುತ್ತಾ ಹಂಜಗಿ.ನಿಂಬಾಳ ಕೋಳೂರಗಿ ಮಾರ್ಗದ ಬಸ್ ಸರಿಯಾದ ಸಮಯಕ್ಕೆ ಬರದು ತೊಂದರೆ ಅನುಭವಿಸುವಂತಾಗಿದೆ.ಅಷ್ಟೆಯಲ್ಲ ತಾಲೂಕೀನ ಬಹುತೇಕ ಗ್ರಾಮಗಳಲ್ಲಿ ಹಿಂತಾ ಸಮಸ್ಯೆಗಳು ಇದ್ದು,ಈ ವಿಚಾರವಾಗಿ ಹಲವಾರು ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಾ ಕಾಲಹರಣ ಮಾಡುವಂತಾಗಿದೆ.ಎರಡು ಮೂರು ತಿಂಗಳಲ್ಲಿ ವಾರ್ಷಿಕ ಪರೀಕ್ಷೆಗಳು ಸಮೀಪಿಸಿತ್ತಿದ್ದು ಹಿಂತಾ ಸಮಯದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತೊಂದರೆ ಆದರೆ ಯಾರು ಜವಾಬ್ದಾರರು.ಕಾರಣ ಮಕ್ಕಳ ಭವಿಷ್ಯ ದೃಷ್ಟಿಯಿಂದ ತಾಲೂಕೀನ ಪ್ರತಿ ವಿದ್ಯಾರ್ಥಿಗೆ ಅನಾನುಕೂಲವಾದರೆ, ಮುಂದಿನ ಕೇಲವೆ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಇದೆ ಸಂದರ್ಭದಲ್ಲಿ ಎಮ್ ಕೆ ಶೇಖ್, ರಮೇಶ ರಾಠೋಡ, ಇಸ್ಮಾಯಿಲ್ ಕುಣಬಿ, ರಿಯಾಜ್ ಪಾಂಡು, ಮಾಳಪ್ಪ ಪೂಜಾರಿ,ಕಿಶೀಮ ವಾಲಿಕಾರ, ವಿನೋದ್ ಕಾಳೆ, ನಿಂಗಪ್ಪ ಹಿರೇಕುರಬರ ಮುಂತಾದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.