ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪ್ರಮುಖ ಬೇಡಿಕೆ ಈಡೇರಿಸುವ ಕುರಿತು ನೌಕರರು ಇಂದು ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು. ಶಿಕ್ಷಕ ಯಶವಂತಗೌಡ ಬಿರಾದಾರ ಮಾತನಾಡಿ ಸರಕಾರವು ರಾಜ್ಯದ ಸರಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್.ಪಿ.ಎಸ್ ರದ್ದುಗೊಳಿಸಿ ಒ.ಪಿ.ಎಸ್ ಜಾರಿಗೊಳಿಸುವ ಭರವಸೆಯನ್ನು ನೀಡಿರುತ್ತದೆ. ಭರವಸೆಯಂತೆ ಹಳೆಯ ನಿಶ್ಚಿತ ಪಿಂಚಣಿ ಜಾರಿಗೊಳಿಸುವಂತೆ ಆಗ್ರಹಿಸಿದರು.
ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ವೇತನ, ನಿವೃತ್ತಿ ವೇತನ, ಇತರೆ ಸೌಲಭ್ಯಗಳ ನಿಯಂತ್ರಣ ವಿಧೇಯಕ ೨೦೧೪ ಕ್ಕೆ ತಿದ್ದುಪಡಿ ತಂದು ಅಥವಾ ರದ್ದುಪಡಿಸಿ ಭವಿಷ್ಯಾವರ್ತಿಯಾಗಿ ಜಾರಿಗೆ ಬರುವ ಕುರಿತು ಮಾತನಾಡಿದರು.
ಪ್ರಕಾಶ ಐರೋಡಗಿ, ಮುಖ್ಯ ಗುರುಗಳಾದ ನಿಜಣ್ಣ ಕಾಳೆ, ಜೆ.ಎಸ್.ದೇವರಮನಿ, ಎಸ್.ಎಸ್.ತೆಲಸಂಗ, ಜೆ.ಎಂ. ಕಣ್ಣಿ, ಮಂಜುನಾಥ ನಾಯ್ಕೋಡಿ, ಎಸ್.ಎಂ.ಮೇತ್ರಿ, ಬಿ.ಎಸ್.ಹಿರೇಮಠ, ಎಸ್.ಎ.ಅಣ್ಣಗೇರಿ, ಡಿ.ಎ.ರಾಠೋಡ, ಎಸ್.ಬಿ.ಗದ್ಯಾಳ, ಎಸ್.ಬಿ.ಡಾಣೆ, ಆರ್.ಎಸ್.ಹಿರೇಮಠ, ಎಚ್.ಬಿ.ಸಾಹುಕಾರ, ಡಿ. ಎಸ್.ಕುಲಕರ್ಣಿ ಮತ್ತಿತರಿದ್ದರು.