ರಾಜ್ಯ ಸರಕಾರ ಪಿಯು ಮಂಡಳಿ ರದ್ದು ಪಡಿಸಿ ಅದರ ಎಲ್ಲ ಕಾರ್ಯಗಳನ್ನು ಜಿ.ಪಂ ಗೆ ವರ್ಗಾಯಿಸುವದನ್ನು ವಿರೋಧಿಸಿ ಪಟ್ಟಣದಲ್ಲಿ ಪಿಯು ಪ್ರಾಚಾರ್ಯರರು ಮತ್ತು ಉಪನ್ಯಾಸಕರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಪಟ್ಟಣದ ಶ್ರೀ ಶಾಂತೇಶ್ವರ ಪಪೂ ಮಹಾವಿದ್ಯಾಲಯದಿಂದ ಪ್ರಾರಂಭಿಸಿ ಮಿನಿ ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿದರು.
ಕಿರಣ ನಡಕಟ್ಟಿ, ಸದಾನಂದ ಈರನಕೇರಿ ಮಾತನಾಡಿ ಪಿಯು ಇಲಾಖೆ ಉಳಿಸಿ ಮತ್ತಷ್ಟು ಬಲಿಷ್ಟ ಗೊಳಿಸುವದು,ಪಿಯು ಪರೀಕ್ಷೆ ಹೊಣೆ ಪಿಯು ಬೋರ್ಡಗೆ ವಾಪಸ್ ನೀಡುವದು,ಪಿಯು ಇಲಾಖೆ ಜಿ.ಪಂ ಗೆ ನೀಡಬೇಡಿ,ಅವೈಜ್ಞಾನಿಕ ಮೂರು ವಾರ್ಷಿಕ ಪರೀಕ್ಷೆ ರದ್ದಾಗಲಿ,ಪಿಯು ಇಲಾಖೆ ಅಸ್ಮಿತೆಗೆ ಮತ್ತು ಅಸ್ತಿತ್ವಕ್ಕೆ ದಕ್ಕೆ ತರಬೇಡಿ,ಪಿಯು ಇಲಾಖೆ ದುರ್ಬಲಗೊಳಿಸಬೇಡಿ,ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಇಲಾಖೆ ಸ್ವತಂತ್ರವಾಗಿರಲಿ ಎಂಬ ಹಲವಾರು ಬೇಡಿಕೆ ಆಗ್ರಹಿಸಿ ಮಾತನಾಡಿದರು. ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪದವಿ ಪೂರ್ವ ಪ್ರಾಚಾರ್ಯರಾದ ಚಂದ್ರಶೇಖರ ಯಳಸಂಗಿ, ತೆಗ್ಗೆಳ್ಳಿ,ಸದ್ಲಾಪುರ,ಎ.ಬಿ.ಪಾಟೀಲ, ಎಸ್.ಎಂ. ಎಮ್ಮಿ,ಉಪನ್ಯಾಸಕರಾದ ಪಂಡಿತ,ನಡಗಟ್ಟಿ,ಗಿಡಗಂಟಿ,ಅಂಗಡಿ,ಬಿರಾದಾರ,ಪೂಜಾರಿ ಮತ್ತಿತರಿದ್ದರು. ಪಿಯು ಮಂಡಳಿ ರದ್ದು ಪಡಿಸಿ ಅದರ ಎಲ್ಲ ಕಾರ್ಯಗಳನ್ನು ಜಿ.ಪಂ ಗೆ ವರ್ಗಾಯಿಸುವದನ್ನು ವಿರೋಧಿಸಿ ಪಟ್ಟಣದಲ್ಲಿ ಪಿಯು ಪ್ರಾಚಾರ್ಯರರು ಮತ್ತು ಉಪನ್ಯಾಸಕರು ಪ್ರತಿಭಟನೆ ನಡೆಸಿದರು.