ಪಟ್ಟಣದ ಅಲ್ ಹಸ್ನಾತ ಸಂಸ್ಥೆಯ ಅಲ್ ಹಸ್ನಾತ ಪದವಿ ಪೂರ್ವ ಮಹಾವಿದ್ಯಾಲಯ ದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಸಸಿ ನೆಡುವ ಮೂಲಕ ಉದ್ಘಾಟನೆ ಮಾಡಿದ ಸಂಸ್ಥೆಯ ಅಧ್ಯಕ್ಷರಾದ ಅಲ್ ಹಾಜ್ ಜನಾಬ್ ಎಮ್ ಡಿ ರೂಗಿಯವರು ಮಕ್ಕಳ ಬದುಕು ಯಾವಾಗಲು ಸಸಿ ಮೃದುವಾಗಿರುತ್ತದೆ. ಮಕ್ಕಳು ಮುಂದೆ ಸಸಿಯಂತೆ ಬೆಳೆದು ಮರವಾಗಿ ಹಣ್ಣು ಕೊಡೋವರಿಗೂ ತಂದೆ ತಾಯಿಯ ಜವಾಬ್ದಾರಿಯಾಗಿದೆ. ಮಕ್ಕಳಿಗೆ ಜ್ಞಾನ ನೀಡುವ ಶಿಕ್ಷಕರು ನಿರಂತರವಾಗಿ ಬೋಧಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.