ಕರ್ನಾಟಕದ ಮಾಜಿ ಸಚಿವ ಮತ್ತು ಐದು ಬಾರಿ ಕಾಂಗ್ರೆಸ್ ಶಾಸಕ ಯುಟಿ ಖಾದರ್ ಅವರು ಬುಧವಾರ ರಾಜ್ಯವಿಧಾನಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕರ್ನಾಟಕ ಇತಿಹಾಸದಲ್ಲಿಯೇ ಇವರೇ ಮೊದಲ ಮುಸ್ಲಿಂ ಸ್ಪೀಕರ್ ನಾಯಕರಾಗಿದ್ದಾರೆ. ಈ ಹುದ್ದೆಗೆ ಬೇರೆ ಯಾರೂ ಸ್ಪರ್ಧಿಸಿರಲಿಲ್ಲ.ಖಾದರ್ ಅವರ ಹೆಸರನ್ನು ರಾಜ್ಯದ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೃಢಪಡಿಸಿದ್ದಾರೆ.