ಇಂಡಿ ಈ ಭಾರಿಯ ಲೋಕಸಭೆ ಚುನಾವಣೆಯಲ್ಲಿ ವಿಜಯಪುರ ಭಾಜಪ ಅಭ್ಯರ್ಥಿಯಾದ ಸನ್ಮಾನ್ಯ ರಮೇಶ ಜಿಗಣಗಿ ಅವರು 150 ಲಕ್ಷಕ್ಕೊ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆಂದು ಇಂಡಿಯ ಭಾಜಪ ಯುವ ಮುಖಂಡ ರಾಮಸಿಂಗ ಕನ್ನೊಳ್ಳಿ ವಿಶ್ವಾಸ ವ್ಯಕ್ತಪಡಿಸಿದರು. ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿಯವರ ಜನಪರ ಆಡಳಿತ ದೇಶದ ಭವ್ಯ ಪರಂಪರೆಯನ್ನು ವಿಶ್ವದಲ್ಲಿ ಅಗ್ರ ಸ್ಥಾನ ಪಡೆಯುವ ಅವಕಾಶ ಮಾಡಿಕೊಟ್ಟ ಮೋದಿಯವರಿಗೆ ಬೆಂಬಲ ನೀಡುವ ಮೂಲಕ ಮತದಾರರು ಆಶಿರ್ವಾದ ಮಾಡಿ ದೇಶದಲ್ಲಿ 400 ಕ್ಕೂ ಅಧಿಕ ಸ್ಥಾನ ಗಳಿಸಿ ಹೊಸ ಇತಿಹಾಸ ನಿರ್ಮಾಣ ಆಗಲಿದೆ ಎಂದು ಹೇಳಿದರು.