ವಿದ್ಯಾರ್ಥಿಗಳ ಕೊರತೆ ಇರುವ 5124 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚುವಂತೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.ಡ್ರಾಪ್ ಔಟ್ ದರ ಕಡಿಮೆ ಮಾಡಲು ಪರಸ್ಪರ 100 ಮೀಟರ್ ಅಂತರದಲ್ಲಿರುವ 3457 ಸರ್ಕಾರಿ ಕಿರಿಯ ಮತ್ತು 1667 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸುವಂತೆ ಹೇಳಿದೆ. ಆಯೋಗದ ಅಧ್ಯಕ್ಷ ವಿಜಯ್ ಭಾಸ್ಕರ್ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಈ ಕುರಿತು ವರದಿ ಸಲ್ಲಿಸಿದ್ದಾರೆ. ಈ ಮೂಲಕ ಇನ್ನಷ್ಟು ಕನ್ನಡ ಶಾಲೆಗಳು ಮುಚ್ಚುವುದು ಖಚಿತವಾಗಿದೆ.