ಇಂಡಿ: ತಾಲೂಕಿನ ಜಿನುಗು ಕೆರೆಗೆ ನೀರುಹರಿಸಲು ಇಂದು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರ ಹಾಗೂ ಬಬಲಾದ ಗ್ರಾಮದ ರೈತರ ನೇತೃತ್ವದಲ್ಲಿ ಇಂಡಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡಾದೆ ಯವರಿಗೆ ಮನವಿ ಸಲ್ಲಿಸಲಾಯಿತು.ನಂತರ ಡಿ ಪಾಟೀಲರು ಮಾತನಾಡುತ್ತಾ ಬಬಲಾದ ಗ್ರಾಮದ ಜಿನಗು ಕೆರೆಗೆ ಬರುವ ಭಯ್ಯಾರ ಪ್ಯಾಕೇಜ್ ದ ಪೈಪಲೈನ ಒಡೆದು ಎರಡು ತಿಂಗಳಾದರೆ ಸಂಭಂದಿಸಿದ ಇಲಾಖೆ ಅಲಕ್ಷದಿಂದ ,ಇಂದು ಕೆರೆ ಸಂಪೂರ್ಣ ಒಣಗಿದೆ.ಜನ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ತೋಂದರೆ ಆಗಿದೆ,ಈ ವರ್ಷ ಮಳೆಯ ಪ್ರಮಾಣ ಕಡಿಮೆ ಆಗಿದ್ದು, ಕೂಡಲೆ ರೈತರ ಹಿತದೃಷ್ಟಿಯಿಂದ ಕೂಡಲೆ ಬಬಲಾದ ಕೆರೆಗೆ ನೀರು ಹರಿಸಿ ಎಂದು ಆಗ್ರಹಿಸಿದರು.ಇದೆ ಸಂದರ್ಭದಲ್ಲಿ ಗಂಗಾಧರಗೌ ಬಿರಾದಾರ ,ಯಲಗೋಂಡ ಪೂಜಾರಿ,ಪುಂಡಲೀಕ ಪಾಟೀಲ, ಅಣ್ಣಾರಾಯ ಬಿರಾದಾರ, ಸಿದ್ದು ಡಂಗಾ,ಸಿದ್ದರಾಯ ಬಿರಾದಾರ,ಮಹಿಬೂಬ ಬೇವನೂರ,ಯಸಣ್ಣ ಬಿರಾದಾರ,ಮಾಹಾದೇವ ಬಿರಾದಾರ,ನಾಗಣ್ಣ ಪೂಜಾರಿ, ಶಾಂತಪ್ಪ ಬಿರಾದಾರ,ಕಾಂತಪ್ಪ ಬಿರಾದಾರ, ರೇವಪ್ಪ ಬಿರಾದಾರ,ಡಾ ರಮೇಶ ರಾಠೋಡ, ಬಾಬು ಮೇತ್ರಿ, ಮುಂತಾದ ನಾಯಕರು ಉಪಸ್ಥಿತರಿದ್ದರು