ಒಕ್ಕಲಿಗ, ಲಿಂಗಾಯತರಿಗೆ ಮೀಸಲಾತಿ ಹೆಚ್ಚಿಸಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ 2ಸಿ ಮತ್ತು 2ಡಿ ಅಡಿ ನೀಡಲಾಗುವ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ. 4ರಿಂದ 6 ಹಾಗೂ ಶೇ. 5ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಮುಸ್ಲಿಮರಿಗೆ 2ಬಿ ಅಡಿ ನೀಡಲಾಗಿದ್ದ ಮೀಸಲಾತಿಯನ್ನು ಈ ಎರಡೂ ಸಮುದಾಯಗಳಿಗೆ ತಲಾ 2% ನಂತೆ ಹಂಚಲಾಗಿದೆ. ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ಮುಸ್ಲಿಮರನ್ನು 2ಬಿ ಅಡಿ ಸೇರಿಸಿದ್ದೇವೆ. ಅಲ್ಲಿ ಶೇ 10 ಮೀಸಲಾತಿ ಇದ್ದು, ಈ ಹಿಂದಿಗಿಂತಲೂ ಜಾಸ್ತಿಸಿಗಲಿದೆ ಎಂದಿದ್ದಾರೆ.