ವಕೀಲರಾದ ಜ. ಮಹಮೂದ ಕಾಜಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಜನಸಂಖ್ಯೆಯಲ್ಲಿ ಶೇಕಡ 60 ರಷ್ಟು ಯುವಕರಾಗಿದ್ದಾರೆ. ಅವರು ಸಮಾಜದ ಬೆನ್ನುಮೂಳೆಯಾಗಿದ್ದಾರೆ.ಸಮಾಜ ಅವರ ಕಡೆ ಆಶಾಭಾವನೆಯಿಂದ ನೋಡುತ್ತಿದೆ ಎಂದರು.ಸಮಾಜದ ಸುಧಾರಣೆಯನ್ನು ಯುವಕ ಸುಧಾರಣೆಯ ಮೇಲೆ ಅವಲಂಬಿತ ಎಂದರು. ಜಮಾತ್ ನ ಸ್ಥಾನೀಯ ಅಧ್ಯಕ್ಷರಾದ ಮಹಮ್ಮದ್ ಯೂಸುಫ್ ಕಾಜಿಯವರು ಅಧ್ಯಕ್ಷತೆವಹಿಸಿದ್ದರು. ವೇದಿಕೆಯ ಮೇಲೆ ಸೊಲಿಡ್ಯಾರಿಟಿ ಯೂಥ್ ಮೂಮೆಂಟನಾ ಅಧ್ಯಕ್ಷರಾದ ಮುದಸ್ಪೀರ್, ಬಾಲಸಿಂಗ್ ಉಪಸ್ಥಿತರಿದ್ದರು. ಇದೇ ವೇಳೆ ಸೊಲಿಡ್ಯಾರಿಟಿ, ದಿನಾಂಕ 18 ಡಿಸೆಂಬರ್ ರಂದು ನಡೆಯುವ ಅಧೀವೇಶನದ ಬಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು.