ಮುದ್ದೇಬಿಹಾಳ: ಪಟ್ಟಣದ ಪುರಸಭೆ ವ್ಯಾಪ್ತಿಯ ಬಸವೇಶ್ವರ ವೃತದಿಂದ ತಂಗಡಗಿ ತೆರಳುವ ರಸ್ತೆ ಹಾಗೂ ಮಾರುಕಟ್ಟೆ ರಸ್ತೆ ಗೂಡಂಗಡಿಗಳು ಶೆಡಗಳು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಕಟ್ಟೆಗಳನ್ನು ಪುರಸಭೆ ಅಧಿಕಾರಿಗಳು ಜೆಸಿಬಿ ನೆರವಿನಿಂದ ತೆರವುಗೊಳಿಸಿದರು. ಆಲಮಟ್ಟಿ ರಸ್ತೆಯ ಸರಕಾರಿ ನೌಕರರ ಭವನದ ಮುಂದೆ ಕೃಷಿ ಚಟುವಟಿಕೆಗಳಿಗೆ ಕಬ್ಬಿಣದ ಕುಡುಗೋಲು ಕೊಡಲಿ ಕೂರಿಗೆ ಮೊದಲಾದ ಸಾಮಗ್ರಿ ತಯಾರಿಸಿಕೊಳ್ಳುತ್ತಿದ್ದ ಕಮ್ಮಾರರ ಕೆಲವು ಶೇಡಗಳನ್ನು ತೆರವುಗೊಳಿಸಲಾಯಿತು.