ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟೆನಿಸ್ಗೆ ವಿದಾಯ ಘೋಷಣೆ ಮಾಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ದುಬೈ ಡ್ಯೂಟಿ ಚಾಂಪಿಯನ್ಶಿಪ್ ಟೂರ್ನಮೆಂಟ್ ಬಳಿಕ ವೃತ್ತಿ ಬದುಕಿನಿಂದ ನಿವೃತ್ತಿ ಪಡೆದುಕೊಳ್ಳುತ್ತಿರುವುದಾಗಿ ಅವರು ಘೋಷಿಸಿದ್ದಾರೆ. 36 ವರ್ಷದ ಸಾನಿಯಾ ಕಳೆದ ವರ್ಷ ಯುಎಸ್ ಓಪನ್ ನಂತರ ಟೆನಿಸ್ ವೃತ್ತಿ ಜೀವನದಿಂದ ನಿವೃತ್ತಿಯಾಗುವ ಬಗ್ಗೆ ನಿರ್ಧರಿಸಿದ್ದರು. ಆದರೆ ಗಾಯದ ಸಮಸ್ಯೆಯಿಂದ ಆ ಪಂದ್ಯದಲ್ಲಿ ಆಡಲು ಅವರಿಂದ ಸಾಧ್ಯವಾಗಿರಲಿಲ್ಲ.ಮುಂದಿನ ತಿಂಗಳು ನಡೆಯುವ ದುಬೈ ಡ್ಯೂಟಿ ಫ್ರೀ ಟೆನಿಸ್ ಚಾಂಪಿಯನ್ ಶಿಪ್ನಲ್ಲಿ ಆಡುವ ಮೂಲಕ ಅಲ್ಲಿಗೆ ತಮ್ಮವೃತ್ತಿ ಬದುಕನ್ನು ಕೊನೆಗೊಳಿಸಲಿದ್ದಾರೆ.