ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ತಮ್ಮ ಪತಿ ಶೋಯೆಬ್ ಮಲಿಕ್ ಜೊತೆಗಿನ ಭಿನ್ನಾಭಿಪ್ರಾಯದಿಂದ ವಿಚ್ಛೇದನಕ್ಕೆ ಸಿದ್ಧರಾಗಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. ಈ ಬಗ್ಗೆ ಈ ಹಿಂದೆ ಶೋಯೆಬ್ ಪ್ರತಿಕ್ರಿಯೆ ನೀಡಿದ್ದರೂ ಗಾಸಿಪ್ ಗಳು ಹರಿದಾಡುತ್ತಲೇ ಇವೆ.ಶೋಯೆಬ್ ಮಲಿಕ್ ಅವರ ಇನ್ಸ್ಟಾಗ್ರಾಮ್ ಬಯೋದಲ್ಲಿನ ಹೊಸ ಟ್ವಿಸ್ಟ್ನಿಂದ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.ಶೋಯೆಬ್ ತಮ್ಮಇನ್ಸಾಗ್ರಾಮ್ ಬಯೋದಲ್ಲಿ ಸೂಪರ್ ವುಮನ್ ಸಾನಿಯಾ ಮಿರ್ಜಾ ಅವರ ಪತಿ ಎಂದು ಬರೆದಿದ್ದಾರೆ. ವಿಚ್ಛೇದನದ ಸುದ್ದಿ ನಿಜವಲ್ಲ ಎಂದು ಶೋಯೆಬ್ ಸ್ಪಷ್ಟಪಡಿಸಿದ್ದಾರೆ.