ಈ ಸಂಘವು ತಾಲೂಕಿನ ಏಕೈಕ ಮಹಿಳಾ ಶಿಕ್ಷಿಕಿಯರ ಸಂಘವಾಗಿದೆ. ತಾಲೂಕಿನ ಎಲ್ಲಾ ಸರಕಾರ ಅನುದಾನಿತ ಶಾಲೆಗಳ ಪ್ರಾಥಮಿಕ ಪದವಿಧರ ಹಾಗೂ ಪ್ರೌಢ ಶಾಲಾ ಶಿಕ್ಷಕಿಯರ ಸ್ವಾಭಿಮಾನದ ಸ್ವತಂತ್ರ ವೇದಿಕೆ ಯಾಗಿದೆ. ಶಿಕ್ಷಣದ ಗುಣಮಟ್ಟವನ್ನು ಕಾಯ್ದಿರಿಸುವ ನಿಟ್ಟಿನಲ್ಲಿ ಶಿಕ್ಷಕರ ಹಿತ ಕಾಯುವಲ್ಲಿ ಹಾಗೂ ಸಾಮಾಜಿಕ ಸಮಾನತೆಯನ್ನು ಕಾಪಾಡುವುದರಲ್ಲಿ ಮಹಿಳಾ ಮತ್ತು ಮಕ್ಕಳ ಸಬಲಿಕರಣದಂತೆ ಉತ್ತಮ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಾಗೂ ಸಾಮಾಜಿಕ ಸೇವೆಯನ್ನು ಮಾಡುವ ಉದ್ದೇಶದಿಂದ ೧೮-೧೯ ನೇ ಸಾಲಿನಲ್ಲಿ ಸ್ಥಾಪಿತಗೊಂಡಿದೆ.
ಶಿಕ್ಷಣ ದ ಗುಣಮಟ್ಟ ಸುಧಾರಣೆ ಕಾರ್ಯಕ್ರಮಗಳನ್ನು ರೂಪಿಸುವುದು.
ಸರಕಾರಕ್ಕೆ ಹಾಗೂ ವಿವಿಧ ಹಂತದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಶಿಕ್ಷಕಿಯರ ಯಾವುದೇ ಸೇವಾ ಸಮಸ್ಯೆಗಳನ್ನು ಕುರಿತು ಗಮನ ಸೆಳೆದು ಬಗೆಹರಿಸಿಕೊಳ್ಳುವುದು.
ಸರಕಾರಿ ಅನುದಾನಿತ ಪ್ರಾಥಮಿಕ೧-೫ ೬-೮ ಮತ್ತು ಪ್ರೌಡ ಶಾಲಾ೯-೧೨ ,ಹಂತದ ಶಿಕ್ಷಕಿಯರ ಸರ್ವತೋಮುಖ ಉನ್ನತಿಗೆ ಶ್ರಮಿಸುವುದು.
ಮಹಿಳಾ ಶಿಕ್ಷಕಿಯರಲ್ಲಿ ನಾಯಕತ್ವ ಗುಣ ಬೆಳೆಸುವುದು ಹಾಗೂ ಮಹಿಳಾ ಸಬಲಿಕರಣಕ್ಕಾಗಿ ಶ್ರಮಿಸುವುದು ಇತ್ಯಾದಿ ಇನ್ನೂ ಅನೇಕ ಗುರಿ ಉದ್ದೇಶ ಹೊಂದಿದೆ.
ಸಾವಿತ್ರಿಬಾಯಿಪುಲೆ ಅವರ ನಡೆದು ಬಂದ ದಾರಿಯಲ್ಲಿ ನಮ್ಮ ಸಾವಿತ್ರಿಬಾಯಿಪುಲೆ ಸಂಘದಿAದ ಪ್ರತಿಯೊಂದು ಜಿಲ್ಲೆ ಹಾಗೂ ತಾಲ್ಲೂಕಗಳಿಗೆ ಶೈಕ್ಷಣಿಕ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದಾರೆ. ಗುಣಮಟ್ಟದ ಶಿಕ್ಷಣದಲ್ಲಿ ಶಿಕ್ಷಕಿಯರ ಪಾತ್ರ ರಚಿಸಿ ತಕ್ಷಣದ ಸಬಲೀಕರಣದಲ್ಲಿ ಮಹಿಳಾ ಶಿಕ್ಷಕಿಯರ ಪಾತ್ರ ಭಾರತೀಯ ಸಂಪ್ರದಾಯಗಳನ್ನು ಸುರಕ್ಷಿಣೆ ಮಾಡುವಲ್ಲಿ ಮಹಿಳಾ ಶಿಕ್ಷಕಿಯರ ಪಾತ್ರವಿದೆ.
ಇದೆ ಹಾದಿಯಲ್ಲಿ ವಿಜಯಪುರ ಜಿಲ್ಲೆ ಹಾಗೂ ಇಂಡಿ ತಾಲ್ಲೂಕಿನ ಸಾವಿತ್ರಿಬಾಯಿಪುಲೆ ಘಟಕಗಳನ್ನು ಅನೇಕ ಶೈಕ್ಷಣಿಕ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಇಂಡಿ ತಾಲ್ಲೂಕಿನ ಘಟಕವು ೨೦೧೯ ರಲ್ಲಿ ಉದ್ಘಾಟನೆಗೊಂಡು ಸುಮಾರು ೫ ವರ್ಷಗಳಲ್ಲಿ ಅನೇಕ ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಪಾಲ್ಗೊಂಡಿದೆ. ಇಂಡಿ ತಾಲ್ಲೂಕಿನ ಸಾವಿತ್ರಿಬಾಯಿಪುಲೆ ಸಂಘದ ಅಧ್ಯಕರಾದ ಮಾತೆ ಮಲ್ಲಮ್ಮ ಗಿರಣಿವಡ್ಡರ್ ಪ್ರದಾನ ಕಾರ್ಯದರ್ಶಿ ಬಿ.ಸಿ. ಭಗವಂತರಾಯಗೌಡರ, ಗೌರವ ಅಧ್ಯಕ್ಷ ಸೈಪನಮಾ ಮಕಂದಾರ, ಕೋಶಾಧ್ಯಕ್ಷ ಎಸ್ ಕೆ ಮಾವಿನಮರ ಹಾಗೂ ಗೌರವಾನ್ವಿತರು ಉಪಾಧ್ಯಕ್ಷ ಸಂಘಟನಾ ಕಾರ್ಯದರ್ಶಿಗಳು ಸಹಕಾರ್ಯದರ್ಶಿಗಳು ನೇತೃತ್ವದಲ್ಲಿ ಸಂಘವು ಅನೇಕ ಶೈಕ್ಷಣಿಕ ಗೋಷ್ಠಿಗಳನ್ನು ಏರ್ಪಡಿಸುತ್ತದೆ. ಅನೇಕ ಅತ್ಯುತ್ತಮ ಶಿಕ್ಷಕ ಶಿಕ್ಷಕಿಯರಲ್ಲಿ ಸಾವಿತ್ರಿಬಾಯಿಪುಲೆ ಮತ್ತು ಜ್ಯೋತಿಬಾ ಪುಲೆ ಪ್ರಶಸ್ತಿಗಳನ್ನು ನೀಡಿವುದರ ಮುಖಾಂತರ ಅನೇಕರ ಶಿಕ್ಷಕರಿಗೆ ಗೌರವವನ್ನು ನೀಡಿ ಆ ಮುಖೇನ ಅನೇಕ ಶಿಕ್ಷಕರಿಗೆ ಮಹಿಳಾ ಶಿಕ್ಷಕರಿಗೆ ಸ್ಪೂರ್ತಿದಾಯಕವಾಗಿದೆ. ಹಾಗೆ ಅನೇಕ ಮಹಿಳಾ ಶಿಕ್ಷಕಿಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ.
ಅನೇಕ ಮಹಿಳಾ ಕಾರ್ಯಕ್ರಮಗಳನ್ನು ಮಾಡುತ್ತಾ ಹಾಗೂ ಸಕ್ರಿಯವಾಗಿ ಭಾಗವಹಿಸುತ್ತಾ ಸಂಘವು ಮಹಿಳೆಯರಿಗೆ ಮಾದರಿಯಾಗಿದೆ. ಅನೇಕ ಸಾಮಾಜಿಕ, ರಾಷ್ಟಿçÃಯ ಜಾಗೃತಿ ಜಾಥಾಗಳಲ್ಲಿ ನೌಕರರ ಸಂಘದಲ್ಲಿ ಮಹಿಳಾ ಪ್ರಾತಿನಿಧಿ ಒದಗಿಸುವಂತೆ ಒತ್ತಾಯಿಸಿ ಪತ್ರ ಚಳುವಳಿಯ ಇಂತಹ ಹೋರಾಟಗಳನ್ನು ಮಾಡುತ್ತಾ ಬಂದಿವೆ. ಈ ಸಂಘವು ರಾಜ್ಯ ಜಿಲ್ಲಾ ಸಂಘಟನಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಸಂಘದ ಎಲ್ಲಾ ಸದಸ್ಯರು ಬಹುಮುಖ ಪ್ರತಿಭೆಯ ಅತ್ಯುತ್ತಮ ಶಿಕ್ಷಕಿಯರಾಗಿ ಕರ್ತವ್ಯ ನಿರ್ವಹಿಸುವ ಸಾಮಾಜಿಕ ಕಳಕಳಿಯನ್ನು ಹೊಂದಿವುದರ ಮೂಲಕ ಮಾತೆ ಸಾವಿತ್ರಿಬಾಯಿಪುಲೆ ಅವರ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂಬೂದು ಹೆಮ್ಮೆಯ ಸಂಗತಿ.