ಇಂಡಿ: ಪಟ್ಟಣದ ವಿವಿಧ ವಾರ್ಡಗಳಲ್ಲಿ ಬೀದಿಯಲ್ಲಿನ ಚರಂಡಿ ಸ್ವಚ್ಛತೆಯಿಲ್ಲದೆ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ಚರಂಡಿಯಲ್ಲಿ ಕೊಳಚೆ ನೀರು ನಿಂತು ಸೊಳ್ಳೆಯ ಉತ್ಪಾದನೆ ಕೇಂದ್ರವಾಗಿದೆ.
ಪಟ್ಟಣದ 6ನೇ ವಾರ್ಡ ಪುರಸಭೆಯ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರ ವಾರ್ಡವಾಗಿದ್ದು. ಪೂಜಾರಿ ಒಣಿಯಲ್ಲಿ ಬೀದಿಯಲ್ಲಿ ಸಮರ್ಪಕ ಚರಂಡಿಯಿಲ್ಲ . ಮೂಲ ಸೌಕರ್ಯ ಕೊರತೆ ಎದ್ದು ಕಾಣುತ್ತಿದ್ದು, ಚರಂಡಿಗಳ ಅಭಿವೃದ್ಧಿಯಾಗಿಲ್ಲ ಎಂದು ಅಲ್ಲಿನ ಜನರ ಪುರಸಭೆ ಆಡಳಿತದ ವಿರುದ್ಧ ಆರೋಪಿಸಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ ಎಂದು ವಾರ್ಡ್ನ ಜನ ಕಿಡಿಕಾರಿದ್ದಾರೆ.
ವಿಸ್ತೀರ್ಣ ಚಿಕ್ಕದು, ಆದರೆ ಬೀದಿಗಳು ಸ್ವಚ್ಛತೆ ಇಲ್ಲದಂತಾಗಿದೆ. ವಾರ್ಡಿನಲ್ಲಿ ಚಿಕ್ಕ ಮಕ್ಕಳು ವೃದ್ದರು, ಹೆಚ್ಚಿನ ಸಂಖೆಯಲ್ಲಿ ವಾಸವಿದ್ದು, . ಸಣ್ಣ ಗಲ್ಲಿಗಳು ವಾರ್ಡಿನಲ್ಲಿದ್ದು ಚರಂಡಿಗಳು ಸ್ವಚತೆಯಿಲ್ಲದೆ ಸ್ವಳೆಗಳ ಕಾಟ ಜಾಸತ್ತಿಯಾಗಿದೆ. ವಾರ್ಡಿನ ರಸ್ತೆಯಲ್ಲಿ ಒಂದು ಬದಿಯ ಚರಂಡಿ ಸಂಪೂರ್ಣವಾಗಿ ಮುಚ್ಚಿಹೋಗಿದ್ದು ಇನ್ನೊಂದು ಕಡೆ ಅಲ್ಲಲ್ಲಿ ಹೂಳು ತುಂಬಿಕೊಂಡು ನೀರು ಮುಂದಕ್ಕೆ ಹರಿಯಲಾಗದೆ ಅಲ್ಲೇ ನಿಂತಿದೆ.
ಕಾಲೊನಿಯಲ್ಲಿ ನಿರ್ಮಾಣವಾಗಿರುವ ಅವೈಜ್ಞಾನಿಕ ಚರಂಡಿಗಳಿಂದಾಗಿ ಕೊಳಚೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ,. ಅಲ್ಲದೇ ಕೊಳಚೆ ನೀರು ಸಂಗ್ರಹಗೊಳ್ಳುವುದರಿಂದ ಸೊಳ್ಳೆಗಳ ಆವಾಸ್ಥಾನವಾಗಿ ಮಾರ್ಪಾಟಾಗಿವೆ. ಕೊಳಚೆ ನೀರು ಮತ್ತು ಮಳೆ ನೀರು ಪ್ರತ್ಯೇಕವಾಗಿ ಹರಿಯಲು ಸಮರ್ಪಕ ಚರಂಡಿ ವ್ಯೆವಸ್ಥೆಯಿಲ್ಲ. ಇಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವವರು ತಮ್ಮ ಮನೆಗಳಿಗೆ ಹಗಲಿನಲ್ಲಿ ಹೋಗಲು ಹರಸಾಹಸ ಪಡುವಂತಾಗಿದೆ. ಅಲ್ಲದೇ ಪೋಷಕರು ತಮ್ಮ ಚಿಕ್ಕ ಮಕ್ಕಳನ್ನ ಮನೆಯಿಂದ ಹೊರಗಡೆ ಬಿಡಲು ಭಯ ಪಡುವಂತಾಗಿದೆ.
ಅಲ್ಲದೇ ವಾರ್ಡ್ನಲ್ಲಿ ಕುಡಿಯುವ ನೀರಿ ಸಮಸ್ಯೆಯೂ ಇದ್ದು, ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸಿಲ್ಲ.
ಕೊಳಚೆ ನೀರು ಸಂಗ್ರಹದಿಂದ ನಗರ ಪ್ರದೇಶಗಳಲ್ಲಿ ಸೊಳ್ಳೆಗಳು ಹೆಚ್ಚಾಗುತ್ತಿವೆ. ಮಲೇರಿಯಾ, ಟೈಫಾಯಿಡ್, ಡೆಂಗಿಗಳಂತಹ ರೋಗಗಳ ಉಲ್ಬಣಕ್ಕೆ ಕಾರಣವಾಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.
ಈ ಬಗ್ಗೆ ಜನಪ್ರತಿನಿಧಿಗಳಿಗೂ, ಅಧಿಕಾರಿಗಳಿಗೂ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನಿವಾಸಿಗಳು ಸಮಸ್ಯೆಗಳ ಸುಳಿಯಲ್ಲಿಯೇ ಬದುಕು ನಡೆಸುವಂತಾಗಿದೆ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.