ಸ್ವಾಭಿಮಾನಿ ರಾಷ್ಟç ನಿರ್ಮಾಣಕ್ಕೆ ಹೋರಾಡಿದ ಶಿವಾಜಿ ಮಹಾರಾಜರು ಹಿಂದುಸ್ಥಾನವನ್ನು ಒಗ್ಗುಡಿಸಲು ಬಹುವಾಗಿ ಶ್ರಮಿಸಿದರು. ಶಿವಾಜಿಯ ಧೈರ್ಯ,ಶೌರ್ಯ,ಸಾಹಸ ರಾಷ್ಟç ಭಕ್ತಿ ಆಡಳಿತಗಾರರಿಗೆ ಎಂದೆAದಿಗೂ ಪ್ರೇರಣಾದಾಯಕವಾಗಿದ್ದು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ಅವರ ಹೆಸರು ಇದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಯಮುನಾಜಿ ಸಾಳುಂಕೆ ಮಾತನಾಡಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕಾ ಆಡಳಿತ ವತಿಯಿಂದ ನಡೆದ ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು.
ಯುವ ಧುರೀಣ ಶ್ರೀಧರ ಕ್ಷತ್ರಿ ಮಾತನಾಡಿ ಬಾಲ್ಯದ ವಯಸ್ಸಿನಲ್ಲಿಯೇ ತಾಯಿ ಜೀಜಾಬಾಯಿಯಿಂದ ಜೀವನ ಮೌಲ್ಯಗಳ ಶಿಕ್ಷಣ ಪಡೆದಿದ್ದ ಶಿವಾಜಿ ಸಂತ ರಾಮದಾಸರ ಪರಮಭಕ್ತರಾಗಿದ್ದರು ಎಂದರು.
ಗ್ರೇಡ್ ೨ ತಹಸೀಲ್ದಾರ ಧನಪಾಲಶೆಟ್ಟಿ, ಸೋಮಯ್ಯ ನಿಂಬರಗಿಮಠ ಮಾತನಾಡಿದರು.
ಸಮಾರಂಭದಲ್ಲಿ ಮರಾಠ ಸಮಾಜದ ಅಧ್ಯಕ್ಷ ನರಸಿಂಹ ಪವಾರ, ರಾಜು ಪತಂಗೆ, ಸತೀಶ ಕುಂಬಾರ, ರಾಮಸಿಂಗ ಕನ್ನೊಳ್ಳಿ, ಸಂಜು ಪವಾರ, ಸಿಬ್ಬಂದಿ ಬಸವರಾಜ ರಾಹೂರ,ಎಂ.ಪಿ.ಕೊಡತೆ ಮತ್ತಿತರಿದ್ದರು.