ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ, ಮರಗೂರ ಸನ್ 2023-24 ನೇ ಸಾಲಿನ ಹಂಗಾಮಿಗೆ ಕಬ್ಬು ಪೂರೈಕೆ ಮಾಡುವ ರೈತ ಬಾಂಧವರಿಗೆ ತಿಳಿಸುವುದೇನೆಂದರೆ, ನಮ್ಮ ಕಾರ್ಖಾನೆಗೆ ಕೇಂದ್ರ ಸರ್ಕಾರದಿಂದ ನಿಗಧಿಪಡಿಸಿದ ನ್ಯಾಯ ಮತ್ತು ಲಾಭದಾಯಕ ಬೆಲೆ (F.R.P ) ರೂ. 3221/- ಪ್ರತಿಟನ್ಗೆ (ಸದರಿ ಕಬ್ಬಿನ ಬೆಲೆ ಮತ್ತು ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಸಹಿತ ) ಇರುವುದು. ನಮ್ಮ ಕಾರ್ಖಾನೆಯು 2023-24 ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ರೂ, 2700 /- ದರದಂತೆ ನೀಡಲು ಕಾರ್ಖಾನೆಯ ಅಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿಯವರು ನಿರ್ಣಯಿಸಿರುತ್ತಾರೆ. ಸದರಿ ಹಂಗಾಮಿನಲ್ಲಿ F.R.P ಗಿಂತ ರೂ.179/- ಪ್ರತಿ ಟನ್ಗೆ ಹೆಚ್ಚುವರಿಯಾಗಿ ಸಂದಾಯಮಾಡಿದಂತಾಗುತ್ತದೆ.
ರೈತಗೊಸ್ಕರ ಆರಂಭವಾದ ಈ ಕಾರ್ಖಾನೆಗೆ ಸದರಿ ಹಂಗಾಮಿಗೆ ಎಲ್ಲ ರೈತ ಬಾಂಧವರು ಹೆಚ್ಚಿನ ಪ್ರಮಾಣದಲ್ಲಿ ಒಳ್ಳೆಯ ಗುಣಮಟ್ಟದ ಕಬ್ಬನ್ನು ಕಾರ್ಖಾನೆಗೆ ಗೆ ಪೂರೈಕೆ ಮಾಡಲು ವಿನಂತಿಸಿಕೊಳ್ಳುತ್ತೇವೆ. ಕಳೆದ ಎಲ್ಲಾ ಹಂಗಾಮುಗಳ ಯಶಸ್ವಿಗೆ ತಾವು ಬಹಳಷ್ಟು ಸಹಕರಿಸಿದ್ದು, ಈ ಹಂಗಾಮಿಗೂ ಕೂಡಾ ಸಹಕರಿಸಿ ಹಂಗಾಮವನ್ನು ಯಶಸ್ವಿಗೊಳಿಸಲು ವಿನಂತಿಸುತ್ತೇವೆ.ಧನ್ಯವಾದಗಳು 🙏ಅಧ್ಯಕ್ಷರುಶ್ರೀ. ಯಶವಂತರಾಯಾಗೌಡ ವ್ಹಿ. ಪಾಟೀಲ, ಶಾಸಕರು ಇಂಡಿ