ವಿಜಯಪುರ : ಜಿಲ್ಲೆಯ ಕೊಲ್ಹಾರ ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜಯಂತಿಯನ್ನುದ್ದೇಶಿಸಿ ಮಾತನಾಡಿದ ಅವರು ಅತ್ಯಂತ ಚತುರಮತಿಗಳಾಗಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಬ್ಯಾರಿಸ್ಟರ್ ಪದವಿ ಪಡೆದವರಾಗಿದ್ದರು.
ಕಿರಿಯ ವಯಸ್ಸಿನಲ್ಲೇ ಕಲ್ಕತ್ತಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನೇಮಕಗೊಂಡಿದ್ದರು ಅವರ ಪ್ರತಿ ಮಾತಿನಲ್ಲೂ ದೇಶಾಭಿಮಾನ ಹಾಸುಹೊಕ್ಕಾಗಿತ್ತು.
ಜಮ್ಮು ಕಾಶ್ಮೀರವನ್ನು ದೇಶದಿಂದ ಪ್ರತ್ಯೇಕಿಸುವ ಸಂವಿಧಾನದ 370ನೇ ವಿಧಿಯನ್ನು ಆರಂಭದಿಂದಲೂ ಶ್ಯಾಮ್ ಪ್ರಸಾದ್ ಮುಖರ್ಜಿ ವಿರೋಧಿಸುತ್ತಾ ಬಂದವರು ಕಣಿವೆ ರಾಜ್ಯಕ್ಕೆ ಪ್ರತ್ಯೇಕತೆಯ ಸ್ಥಾನಮಾನ ನೀಡುವ ಅಂದಿನ ಕೇಂದ್ರ ಸರಕಾರದ ಕ್ರಮವನ್ನು ಬಲವಾಗಿ ವಿರೋಧಿಸಿ ಏಕ್ ದೇಶ್ ಮೆ ದೋ ವಿಧಾನ್, ದೋ ಪ್ರಧಾನ್ ಔರ್ ದೋ ನಿಶಾನ್ ನಹಿ ಚಲೇಂಗೆ ನಹಿ ಚಲೇಂಗೆ ಎನ್ನುವ ಘೋಷಣೆಯ ಮೂಲಕ ವಿರೋಧವ್ಯಕ್ತಪಡಿಸಿ ದೇಶಾಭಿಮಾನ ಪ್ರದರ್ಶಿಸಿದರು
ಅಂತಹ ಮಹಾನ್ ನಾಯಕರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಯೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ.ಪಂ ಮಾಜಿ ಅಧ್ಯಕ್ಷ ವಿರುಪಾಕ್ಷಿ ಕೋಲಕಾರ, ರಾಮಣ್ಣ ಬಾಟಿ, ಪ.ಪಂ ಸದಸ್ಯರಾದ ಬಾಬು ಬಜಂತ್ರಿ, ಶ್ರೀಶೈಲ ಅಥಣಿ, ಅಪ್ಪಾಸಿ ಮಟ್ಯಾಳ, ಶ್ರೀಶೈಲ ಮಠಪತಿ, ವಿಜಯಕುಮಾರ್ ಕೊಟ್ಟಗಿ, ಚಂದ್ರಶೇಖರ್ ನಟೆಕಟ್ಟಿ ಇತರರು ಇದ್ದರು.
ಬ್ಯೂರೋ ರಿಪೋರ್ಟ್: ಲಾಲಸಾಬ ಸವಾರಗೋಳ I Today News ವಿಜಯಪುರ