ಸಿಂದಗಿ ತಾಲೂಕಿನ ಬೂದಿಹಾಳ ಪಿ ಎಚ್ ಗ್ರಾಮದಲ್ಲಿ ಅಕ್ಕ ಮತ್ತು ತಮ್ಮನನ್ನು ಕಟ್ಟಿಗೆ ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಲಾಗಿದೆ. ರಾಜಶ್ರೀ ಶಂಕರಗೌಡ ಬಿರಾದಾರ್ (32) ಮತ್ತು ನಾನಾಗೌಡ ಶ್ರೀಮಂತ (29) ಕೊಲೆಗೀಡಾದ ಅಕ್ಕ-ತಮ್ಮ ಎಂದು ತಿಳಿದುಬಂದಿದೆ. ರಾಜಶ್ರೀ ಪತಿ ಶಂಕರಗೌಡ ಹಾಗೂ ಇತರ ನಾಲ್ವರು ಸೇರಿ ಕೊಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ ಬೂದಿಹಾಳ ಗ್ರಾಮದ ಹೊರಭಾಗದಲ್ಲಿ ಘಟನೆ ನಡೆದಿದೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹತ್ಯ ಯಾದವರು ದೇವರನಾವದಗಿ ಗ್ರಾಮದಲ್ಲಿ ವಾಸ ಮಾಡುತ್ತಿದ್ದರು ಎನ್ನಲಾಗಿದೆ.