ದೇಶದಲ್ಲಿ ಇಂದಿನಿಂದ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ನಿಷೇಧವಾಗಲಿದ್ದು, ಮಾರಾಟ ಮಾಡಿದರೆ ಭಾರಿ ದಂಡ ಪಾವತಿಸಬೇಕಾಗಿದೆ. ಕೇಂದ್ರ ಸರ್ಕಾರದ ಆದೇಶ ಹಿನ್ನೆಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಏಕ ಬಳಕೆಯ ಪ್ಲಾಸ್ಟಿಕ್ ಬ್ಯಾನ್ ಮಾಡುವ ಕುರಿತು ಮಾಹಿತಿ ನೀಡಿದೆ. ಇಂದಿನಿಂದ ಪ್ಲಾಸ್ಟಿಕ್ ಕಡ್ಡಿ ಹೊಂದಿರುವ ಇಯರ್ ಬಡ್ಸ್ ,ಬಲೂನನ್ ಪ್ಲಾಸ್ಟಿಕ್ ಕಡ್ಡಿ , ಐಸ್ ಕ್ರೀಮ್ – ಕ್ಯಾಂಡಿ ಸ್ಟಿಕ್ , ಪ್ಲಾಸ್ಟಿಕ್ ಪ್ಲೇಟ್, ಕಪ್ಸ್, ಗ್ಲಾಸ್ , ಸ್ಪೂನ್. ಪ್ಲಾಸ್ಟಿಕ್ ಚಾಕು ಎಲ್ಲಾ ಬ್ಯಾನ್ ಆಗಲಿವೆ. ಈ ನಿಷೇಧಿತ ಪ್ಲಾಸ್ಟಿಕ್ ಬಳಸಿದರೆ ಮಾರಾಟ ಮಾಡಿದರೆ ದಂಡ ವಿಧಿಸಲಾಗುತ್ತದೆ. ಉತ್ಪಾದಕರಿಗೆ 5ರಿಂದ 20 ಸಾವಿರ ರೂಪಾಯಿವರೆಗೆ ದಂಡ ಮಾರಾಟಗಾರರಿಗೆ 200 ರೂಪಾಯಿಂದ 1 ಸಾವಿರ ರೂಪಾಯಿವರೆಗೆ ದಂಡ ಬೀಳಲಿದೆ. ಜೊತೆಗೆ ಎಲ್ಲಾ ವಸ್ತುಗಳು ಸಿಜ್ ಆಗಲಿವೆ KSPCB ಜುಲೈ 1 ರಿಂದ ನಿಷೇಧಿತ ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು , ಅವರು ಪ್ಲಾಸ್ಟಿಕ್ ಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.