ವಿಜಯಪುರ: ಕೇವಲ ಓದು ಮಾತ್ರ ಮಾನಸಿಕ ಮತ್ತು ದೈಹಿಕ ದೃಢತೆಗೆ ಕಾರಣವಲ್ಲ, ಆಟವಿದ್ದರೆ ಮಾತ್ರ ಪಾಠ ಚೆನ್ನ ,ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗೂ ಒತ್ತನ್ನು ನೀಡಬೇಕು ಆಗ ಶಾಲೆಗೂ ಕೀರ್ತಿ ದೇಶಕ್ಕೂ ಕೀರ್ತಿ ಬರುತ್ತದೆ ಎಂದು ಗುಣಕಿ ಕ್ಲಸ್ಟರ್ ಸಿ ಆರ್ ಪಿ ಈರಣ್ಣ ಬಂಡೆ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಮಿಂಚನಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುಣಕಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಶರೀರ ಮಾಧ್ಯಮಂ ಖಲು ಧರ್ಮ ಸಾಧನಂ ಎನ್ನುವಂತೆ ಗಟ್ಟಿಯಾದ ಶರೀರವಿದ್ದರೆ ಆರೋಗ್ಯವಂತರಾಗಿರುತ್ತಾರೆ. ಕ್ರೀಡೆಗಳನ್ನು ಆಡುವುದರಿಂದ ದೃಢ ಶರೀರದ ಜೊತೆಗೆ ಆರೋಗ್ಯವಂತ ಮನಸ್ಸು ನಿರ್ಮಾಣವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಶಿಕ್ಷಣ ಸಂಯೋಜಕರಾದ ಆರ್ ಕೆ ಪವಾರ ಮಾತನಾಡಿ, ಶಿಕ್ಷಣ ಮತ್ತು ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಶಿಕ್ಷಣವು ದೈಹಿಕ ಶಿಕ್ಷಣಕ್ಕೆ ಸ್ಫೂರ್ತಿಯಾದರೆ ,ದೈಹಿಕ ಶಿಕ್ಷಣವು ಬೌದ್ಧಿಕ ವಿಷಯಗಳಿಗೆ ಪೂರಕ ಅಂಶಗಳನ್ನು ನೀಡಿ ಕಲಿಕೆಗೆ, ಕಲಿಕಾ ಪ್ರಗತಿಗೆ ಪೂರಕ ವ್ಯವಸ್ಥೆಯನ್ನು ಮಾಡಿಕೊಡುತ್ತದೆ ಎಂದು ಹೇಳಿದರು.
ತಾಂಡಾ ನಾಯಕರು ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರಕಾಶ ರಾಠೋಡ,ಗ್ರಾಮ ಪಂಚಾಯತಿ ಸದಸ್ಯರಾದ ಸಂತೋಷ ರಾಠೋಡ, ಗೋವಿಂದ ರಾಠೋಡ, ಲಕ್ಷ್ಮಣ ರಾಠೋಡ, ಮುಖ್ಯ ಶಿಕ್ಷಕಿ ಎಲ್ ವೈ ಹೊನ್ನಕಸ್ತೂರಿ, ನಿವೃತ್ತ ಶಿಕ್ಷಕರಾದ ಜಿ ಬಿ ಪವಾರ, ಮಕಣಾಪೂರ ಸಿ ಆರ್ ಪಿ ಶ್ರೀಕಾಂತ ಮೇತ್ರಿ, ಬೇಳ್ಳೆನವರ, ಬಸವರಾಜ ತಾಳಿಕೋಟಿ, ಈ ಜಿ ರಾಠೋಡ,ಪಂಡಿತ ಗಾಯಕವಾಡ, ಕೆ ಬಿ ನಾಯಕ, ಎಚ್ ಎಸ್ ಬಂಡಿವಡ್ಡರ, ಆರ್ ಎಸ್ ಪಾದಗಟ್ಟಿ, ಎಸ್ ಜಿ ಬಾಗಲಕೋಟ, ಎಸ್ ಜಿ ಭಾವಿಕಟ್ಟಿ, ಎಸ್ ಎಸ್ ಮಠ ಹಾಗೂ ಎನ್ ಆರ್ ಹೊನ್ನುಟಗಿ, ಪಾಟೀಲ, ಜಿ,ಆರ್, ಕಟ್ಟಿಮನಿ, ದೈಹಿಕ ಶಿಕ್ಷಕರಾದ ಎಸ್ ಜಿ ಜಿತ್ತಿ, ಚವಾಣ್, ಬಸವರಾಜ ತಾಳಿಕೋಟಿ, ಎ ಡಿ ಲಮಾಣಿ ನಿರ್ಣಾಯಕರಾಗಿದ್ದರು.
ಕೆ ಬಿ ನಾಯಕ್ ಸ್ವಾಗತಿಸಿದರು. ಶಿಕ್ಷಕ ಎಚ್ ಕೆ ಬೂದಿಹಾಳ ನಿರೂಪಿಸಿದರು. ಎಸ್ ಎಚ್ ಬಂಡಿವಡ್ಡರ ವಂದಿಸಿದರು.