ಇಂಡಿ.ಹಿರೇರೂಗಿಯ ಪಾವನ ಪುಣ್ಯ ಭೂಮಿಯಲ್ಲಿ ಅನಾದಿ ಕಾಲದಲ್ಲಿ ಮಲೇನಾಡಿನಿಂದ ಹಿರೇರೂಗಿಯ ಹಳ್ಳದ ದಂಡೆಯ ಮೇಲೆ ನರಸಿಂಹ ದೇವರ ಅವತಾರಿಯಾಗಿ ನೆಲೆನಿಂತು ನಂಬಿದ ಭಕ್ತರ ಇಷ್ಟಾರ್ಥ ಈಡೇರಿಸುವ ಜಗದೊಡೆಯ ಶ್ರೀ ಜೆಟ್ಟಿಂಗೇಶ್ವರ ನಾಮದಿಂದ ನೆಲೆನಿಂತು ನಂಬಿದ ಭಕ್ತರ ಕಾಯುವ ಮಲ್ಲಾಡ್ ಗೂಳಿಯಂಬ ನಾಮದಿಂದ ಭಕ್ತರ ಹೃದಯದಲಿ ನೆಲೆಸಿದ್ದಾರೆ.ವರ್ಷದಲ್ಲಿ ಮೂರು ಬಾರಿ ಶ್ರೀ ಜೆಟ್ಟಿಂಗೇಶ್ವರ ಜಾತ್ರಾ ನಡೆಯು ಪದ್ದತಿ ಇದ್ದು, ಗಣೇಶ ಚತುರ್ಥಿಯ ಶುಭಸಮಯದಲ್ಲಿ ಸುಮಾರು ಒಂಬತ್ತು ಊರಿನ ದೇವರುಗಳು ಹೂವಿನಲ್ಲಿ ಕೂರುವುದು ವಿಶೇಷ ಅದರಲ್ಲಿ ಬಳಗಾನೂರದ ಶ್ರೀ ಕೇದಾರ ಲಿಂಗ,ಬನ್ನಹಟ್ಟಿಯ ಶ್ರೀಲಾಯಮ್ಮ ತಾಯಿ,ತೆನ್ನಳ್ಳಿಯ ಶ್ರೀ ಜನವಾರಸಿದ್ದ,ಗೋರನಾಳದ ಶ್ರೀ ಬೀರಲಿಂಗೇಶ್ವರ,ಬೋಳೆಗಾವಂದ ಶ್ರೀ ಸ್ಥಾವರಸಿದ್ದ,ತಡವಲಗಾದ ಶ್ರೀ ಮಡಿಸಿದ್ದ,ರೂಗಿಯ ಶ್ರೀ ರೇವಣಸಿದ್ದ ಮುಂತಾದ ದೇವರುಗಳು ಹೂವಿನಲ್ಲಿ ಕೂರುವುದು ವಿಶೇಷ.ಈ ಜಾತ್ರೆಗೆ ಮಹಾರಾಷ್ಟ್ರ,ಗೋವಾ ಹಾಗೂ ಕರ್ನಾಟಕದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ದರ್ಶನ ಆರ್ಶಿವಾದ ಪಡೆದು ಧನ್ಯತೆಯನ್ನು ಪಡೆಯುವರು.
ಸುಮಾರು ಎರಡು ದಿನಗಳಕಾಲ ನಿರಂತರ ಬಗೆ ಬಗೆಯ ವಿಶೇಷವಾದ ಪ್ರಸಾದ್ ನಡೆಯುವದು, ಸುಮಾರು 10.12 ಸುಪ್ರಸಿದ್ಧ ಡೂಳ್ಳಿನ ಗಾಯನ ಸಂಘದಿಂದ ಹಾಡಿಕೆ ನಿರಂತ ಹಗಲು ರಾತ್ರಿ ನಡೆಯುವದು ವಿಶೇಷ.ಹಾಗೂ ಲಾಗ ಹಾಗೂ ವಾಲಗದ ಸಂಘದಿಂದ ಡೂಳ್ಳಿನ ಕುಣಿತ, ಸಾಯಂಕಾಲ ಎಲ್ಲಾ ದೇವರುಗಳು ನಡುಊರಿನ ಲಕ್ಷ್ಮಿದೇವಾಲದ ಎದುರಿಗೆ ಪಟ್ಟದ ಪೂಜಾರಿಗಳಿಂದ ದೇವರ ಹೇಳಿಕೆ ನಡೆಯುವದು ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಮಳೆ,ಬೆಳೆಗೆ ಸಂಬಂಧಿಸಿದ ದೇವರ ವಾಣಿಗಾಗಿ ಸಮಚಿತ್ತದಿಂದ ಆಲಿಸುತ್ತಾರೆ.ವಾಣಿ ಮುಗಿದನಂತರ ದೇವರ ಬೆಟ್ಟಿನಡೆಯುವದು ವಿಶೇಷ.ದೇವರ ಬೆಟ್ಟಿಯ ಸಂದರ್ಭದಲ್ಲಿ ಬಂದ ಭಕ್ತರು ಬಾವಪರಾಶರಾಗಿ ದೇವರುಗಳಿಗೆ ಕೈಮುಗಿದು ದೇವರುಗಳಿಗೆ ಬಿಳ್ಕೊಟ್ಟು ತಮ್ಮ ತಮ್ಮ ಊರಿಗೆ ಸಾಗುವರು.ಇದು ಅನಾದಿಕಾಲದಿಂದ ನರಸಿಂಹ ದೇವರ ಅವತಾರಿ ಶ್ರೀ ಜೆಟ್ಟಿಂಗೇಶ್ವರ ಜಾತ್ರೆನಡೆಯುತ್ತಿರುವುದು ಸಂಪ್ರದಾಯವಾಗಿದೆ.ಈ ಎಲ್ಲಾ ವ್ಯವಸ್ಥೆಯನ್ನು ಕಮಿಟಿಯ ಸದಸ್ಯರು ಹಾಗೂ ಊರಿನ ಭಕ್ತರು ,ಯುವಕರು ಪರ ಊರಿನ ಭಕ್ತರ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ ಗುರುಹಿರಿಯರು ಹಾಗೂ ಯುವ ಮಿತ್ರರು ಭಕ್ತಿಭಾವದಿಂದ ಸೇವೆ ಮಾಡುತ್ತಾರೆ.