ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಕಮಲರಾಜ ಮಹಿಳಾ ಮತ್ತು ಮಕ್ಕಳ ಮಕ್ಕಳ ವಿಭಾಗದಲ್ಲಿ 4 ಕಾಲುಗಳೊಂದಿಗೆ ಮಗುವೊಂದು ಜನಿಸಿದೆ. ಈ ಸುದ್ದಿ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು.ಸಿಕಂದರ್ ಕಾಪು ಪ್ರದೇಶದ ಆರತಿ ಕುಶ್ವಾಹ ಎಂಬ ಮಹಿಳೆ ಹೆಣ್ಣು ಮಗುವಿಗೆ ಜನ್ಮನೀಡಿದ್ದಾಳೆ. 2.3 ಕೆಜಿ ತೂಕದ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಮಗುವಿಗೆ ಸೊಂಟದ ಕೆಳಗಿನ ಭಾಗದಲ್ಲಿ 2 ಹೆಚ್ಚುವರಿ ಕಾಲುಗಳು ಹುಟ್ಟಿವೆ ಎಂದು ಅವರು ಹೇಳಿದರು, ಇದನ್ನು ವೈದ್ಯಕೀಯ ವಿಜ್ಞಾನದಲ್ಲಿ ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ.ಶಿಶುವೈದ್ಯರು ಮಗುವಿನ ಸಂಪೂರ್ಣ ಪರೀಕ್ಷೆಯನ್ನು ಮಾಡುತ್ತಿದ್ದಾರೆ.ಎಲ್ಲವೂ ಸರಿ ಹೋದರೆ ಶಸ್ತ್ರಚಿಕಿತ್ಸೆ ಮೂಲಕ ಎರಡು ಕಾಲುಗಳನ್ನು ತೆಗೆಯಲಾಗುತ್ತದೆಯಂತೆ.