ಇಂಡಿ: ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಿ, ತ್ಯಾಜ್ಯವನ್ನು ಸ್ವಚ್ಛಗೊಳಿಸಿ, ಇಡೀ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡುವಲ್ಲಿ ಎಲ್ಲರೂ ಗುರುತರ ಜವಾಬ್ದಾರಿ ನಿಭಾಯಿಸಬೇಕಾಗಿದೆ ಎಂದು ಹಿರೇರೂಗಿ ಪಿಡಿಓ ಬಸವರಾಜ ಬಬಲಾದ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್,ಯುಬಿಎಸ್ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆ, ಜಿಲ್ಲಾ ಪಂಚಾಯತ ವಿಜಯಪುರ ಹಾಗೂ ತಾಲೂಕಾ ಪಂಚಾಯತ ಇಂಡಿ ಮತ್ತು
ಗ್ರಾಮ ಪಂಚಾಯಿತಿ ಹಿರೇರೂಗಿ ವತಿಯಿಂದ ಹಮ್ಮಿಕೊಂಡ
ಸ್ವಚ್ಛತಾ ಹೀ ಸೇವಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುಬಿಎಸ್ ಶಾಲಾ ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಸ್ವಚ್ಛತೆಯು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಅದು ನಮ್ಮ ಜೀವನದ ಅಂಶವಾಗಬೇಕು.ಸ್ವಚ್ಛತೆಯು ಸಫಲವಾಗಬೇಕಾದರೆ ಮೊದಲು ನಮ್ಮೆಲ್ಲರ ಮನಸ್ಸಿನಲ್ಲಿ ಬದಲಾವಣೆಯಾಗಬೇಕು. ಪರಿಸರವನ್ನು ಸ್ವಚ್ಛವಾಗಿಡುವುದೇ ನಮ್ಮ ದೇಶಕ್ಕೆ ನೀಡುವ ಕೊಡುಗೆಯಾಗಿದೆ. ನಮ್ಮ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ನಮ್ಮ ಹೊಣೆಯಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ವಚ್ಛತಾ ಹೀ ಸೇವಾ ಆಂದೋಲನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಗ್ರಾ.ಪಂ ಅಧ್ಯಕ್ಷ ರಾಜಶೇಖರ ಡಂಗಿ,ಉಪಾಧ್ಯಕ್ಷ ಮುಕ್ತಾಬಾಯಿ ಸಮಗಾರ,ಸದಸ್ಯರಾದ ನಿಸಾರ್ ಅಹಮದ್ ಬಾಗವಾನ,ಶಾಂತಾಬಾಯಿ ಬಾರಸಾಕಳೆ,ವಿಜಯಲಕ್ಷ್ಮಿ ಬೇನೂರ,ಶಬಾನಾ ಅಂಗಡಿ,ಇಬ್ರಾಹಿಂ ಬುಡಕಿ,ಅಂಬವ್ವ ಕೋಟಗೊಂಡ,ಚಂದ್ರಯ್ಯ ಮಠಪತಿ,ಶಾರದಾ ನಾವಿ,
ಮಾಯವ್ವ ಹಲಸಂಗಿ,ಜಟ್ಟಪ್ಪ ಝಳಕಿ,ಜಟಿಂಗರಾಯ ಲಾಳಸಂಗಿ,ಗಟ್ಟೆಪ್ಪ ಗಿಣ್ಣಿ,ಸೋಮವ್ವ ಹೊಸಮನಿ,
ಭೀಮರಾಯ ಜೇವೂರ,ನರಸವ್ವ ದಳವಾಯಿ,ಸುನೀಲ ಗುಣಸಾಗರ,ಮಹಾದೇವ ಹುಣಸಗಿ,ಶಿವಮ್ಮ ಕಪ್ಪೆನ್ನವರ,
ಶಿವಪ್ಪ ಪೂಜಾರಿ,ಸಂತೋಷ ಗೊಳ್ಳಗಿ,ಸಾವಿತ್ರಿ ಮಿರಗಿ,
ಸಿಬ್ಬಂದಿಗಳಾದ ಅಕ್ಬರ ಕೊರಬು,ಶ್ರೀಧರ ಬಾಳಿ,ಸುಧೀರ ಗುಡಿಮನಿ ಹಾಗೂ ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ಸುರೇಶ ಅಂಕಲಗಿ, ಎ ಎಂ ಬೆದ್ರೇಕರ, ಶಿಕ್ಷಕರಾದ ಎಸ್ ಆರ್ ಚಾಳೇಕಾರ, ಎಸ್ ಡಿ ಬಿರಾದಾರ, ವಿ ವೈ ಪತ್ತಾರ, ಸಾವಿತ್ರಿ ಸಂಗಮದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.