ಇಂಡಿ : ಸ್ವಾಮಿ ವಿವೇಕಾನಂದರ ಜೀವನ ಮತ್ತು ವ್ಯಕ್ತಿತ್ವ ಕೋಟಿ ಕೋಟಿ ಯುವಕರಿಗೆ ಪ್ರೇರಣೆಯ ಚಿಲುಮೆಯಾಗಿದೆ. ಅವರು ಭಾರತ ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಪಸರಿಸಿದ ಧೀಮಂತ ನಾಯಕರು. ೧೮೯೩ ರಲ್ಲಿ ಚಿಕ್ಯಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ನೀಡಿದ ಭಾಷಣ ಅವಿಸ್ಮರಣೀಯವಾಗಿದೆ ಎಂದು ಉಪನ್ಯಾಸಕ ಶಿವಾನಂದ ವಾಲಿಕಾರ ಹೇಳಿದರು.
ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಎಫ್.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್, ಯುತ್ ರೆಡ್ಕ್ರಾಸ್ ಹಾಗೂ ಸ್ಕೌಟ್ಸ್ & ಗೈಡ್ಸ್ ಘಟಕಗಳ ಅಡಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಂಶುಪಾಲರಾದ ಡಾ.ಎಸ್.ಬಿ.ಜಾಧವ, ಉಪನ್ಯಾಸಕ ಶ್ರೀ.ಬಿ.ಹೆಚ್.ಬಗಲಿ,
ಸಹಾಯಕ ಪ್ರಾಧ್ಯಾಪಕರಾದ ಡಾ.ಶ್ರೀಕಾಂತ ರಾಠೋಡ, ಡಾ.ವಿಶ್ವಾಸ ಕೊರವಾರ, ಡಾ.ಸುರೇಂದ್ರ ಕೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ಆನಂದ ನಡವಿನಮನಿ, ಶ್ರೀ.ಶ್ರೀಶೈಲ, ಡಾ.ಸಿ.ಎಸ್.ಬಿರಾದಾರ, ಡಾ.ಜಯಪ್ರಸಾದ ಡಿ ಶ್ರೀ.ಎಮ್.ಆರ್.ಕೋಣದೆ, ಶ್ರೀ.ಆರ್.ಪಿ.ಇಂಗನಾಳ ಮತ್ತಿತರಿದ್ದರು.