ಮತದಾರರ ಪಟ್ಟಿ ಬಗ್ಗೆ ಕೇಳಿ ಬಂದಿರುವ ಆರೋಪ ನಿರಾಧಾರ.ಮತದಾರರ ಮಾಹಿತಿ ಸಂಗ್ರಹಣೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿಲ್ಲ ಎಂದು ಬಿಜೆಪಿಯ ವಿಜಯಪುರ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಹೇಳಿದರು. ಇಂಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದ್ದಾರೆ.
ಮತದಾರರ ಪಟ್ಟಿಯಿಂದ 6 ಲಕ್ಷ ಮತದಾರರ ಹೆಸರನ್ನು ಆಯೋಗ ಕೈಬಿಟ್ಟಿದೆ. ಆದರೆ 24 ಲಕ್ಷ ಮತದಾರರನ್ನು ಕೈ ಬಿಡಲಾಗಿದೆ ಎಂದು ಡಿ.ಕೆ.ಶಿವಕುಮಾರ ಅವರು ಮಾಡಿರುವ ಆರೋಪ ನಿರಾಧಾರವಾಗಿದೆ ಎಂದರು.
ಮತದರರ ಪಟ್ಟಿಯಲ್ಲಿ ಕಾಂಗ್ರೆಸ್ ಬೆಂಬಲಿತ ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂದು ಹೇಳಿರುವುದು ಸರಿಯಲ್ಲ. ಮತದಾರರ ಯಾದಿಯಲ್ಲಿ ಮರಣ ಹೊಂದಿದ, ಎರಡು ಕಡೆ ಹೆಸರು ಹೊಂದಿದವರ ಹೆಸರನ್ನು ಮಾತ್ರ ತೆಗೆಯಲಾಗಿದೆ ಎಂದರು. ಭೀಮಸಿಂಗ ರಾಠೋಡ, ಕಲ್ಲನಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ,ಶಾಂತು ಕಂಬಾರ, ಗೌಡಪ್ಪಗೌಡ ಪಾಟೀಲ,ಶಾಂತು ಪಾಟೀಲ ಇದ್ದರು.