ತನ್ನ ಮಗಳನ್ನು ಗುಂಡಿಕ್ಕಿ ಕೊಂದು, ಸೂಟ್ಕೇಸ್ನಲ್ಲಿ ತುಂಬಿ ಉತ್ತರಪ್ರದೇಶದ ಯಮುನಾ ಎಕ್ಸ್ಪ್ರೆಸ್ವೇ ಬಳಿ ಎಸೆದಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತ ಆಯುಷಿ ಚೌದರಿ (22) ತಂದೆ ನಿತೇಶ್ ಯಾದವ್ನನ್ನ ಬಂಧಿಸಲಾಗಿದೆ ಎಂದು ಉತ್ತಪ್ರದೇಶದ ಮಥುರಾ ಎಸ್ಪಿ ತಿಳಿಸಿದ್ದಾರೆ.ಅನ್ಯಜಾತಿಯವನನ್ನು ಮದುವೆಯಾಗಿದ್ದಲ್ಲದೇ ತಡರಾತ್ರಿಯವರೆಗೂ ಹೊರಗೆ ಹೋಗುತ್ತಿದ್ದಳು ಅನ್ನೋ ಕೋಪದಿಂದ ರೊಚ್ಚಿಗೆದ್ದ ತಂದೆ ತಾನು ಲೈಸೆನ್ಸ್ ಪಡೆದಿದ್ದ ಗನ್ನಿಂದ (Gun) ಗುಂಡು ಹಾರಿಸಿ ಕೊಂದಿದ್ದಾನೆ.ಬಳಿಕ ಪ್ಲಾಸ್ಟಿಕ್ನಲ್ಲಿ ಸುತ್ತಿ, ಸೂಟ್ಕೇಸ್ನಲ್ಲಿ ತುಂಬಿಕೊಂಡು ಮಥುರಾದ ಯಮುನಾ ಎಕ್ಸ್ಪ್ರೆಸ್ ವೇ ಬಳಿ ಎಸೆದು ಬಂದಿದ್ದಾನೆ.ಒಂದು ವಾರದ ನಂತರ ಸ್ಥಳೀಯ ಕಾರ್ಮಿಕರು ರಕ್ತದ ಮಡುವಿನಲ್ಲಿದ್ದ ಸೂಟ್ಕೇಸ್ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಯುವತಿಯ ಶವ ಪತ್ತೆಯಾಗಿದೆ.