ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಇಂದು ವೇದಾಂತ ಕೇಸರಿ ಎಂದೇ ಹೆಸರು ವಾಸಿಯಾಗಿರುವ ಮಲ್ಲಿಕಾರ್ಜುನ ಶಿವಯೋಗಿಗಳ ಸ್ಮರಣಿಯೊಂದಿಗೆ ಗುರು ಪೂರ್ಣಿಮೆ ಮಹೋತ್ಸವ ಅತಿ ವಿಜೃಂಭಣೆಯಿಂದ ನಡೆಯಿತು.
ಶ್ರೀ ಸಿದ್ದೇಶ್ವರ ಅಪ್ಪಾಜಿ ನಡೆದಾಡುವ ದೇವರೆಂದೆ ಖ್ಯಾತರಾಗಿರುವ. ಶ್ರೀ ಸಿದ್ದೇಶ್ವರ ಅಪ್ಪಾಜಿಅವರ ಗುರು ಪೂರ್ಣಿಮೇ ನಿಮೀತ್ಯ ಸರ್ವಸಧ್ಬಕ್ತರು ಬೆಳಗಿನ ನಾಲ್ಕು ಗಂಟೆಯಿಂದ 10.30 ನಿಮಿಷ ಸಿದ್ದೇಶ್ವರ ಶ್ರೀಗಳ ದರ್ಶನ ತೆಗೆದುಕೊಂಡ ಭಕ್ತರೆಲ್ಲರು ಪುನಿತರಾದರು. ಸುಮಾರು ವರ್ಷಗಳಿಂದ ನಡೆದು ಬಂದ ಆಶ್ರಮ ಜಾತ್ರಾ ಪ್ರಯುಕ್ತ ನಡೆದಾಡುವ ದೇವರ ದರ್ಶನ ಹಾಗೂ ಅನ್ನಪ್ರಸಾದ ಹಾಗೂ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆಯ ದರ್ಶನ ಪಡೆದು ಭಕ್ತರೆಲ್ಲರು ಪುನಿತರಾದರು.
ಧಾರ್ಮಿಕ ನೆಲೆಗಟ್ಟಿನಲ್ಲಿ ಧರ್ಮ ಆಚಾರ ವಿಚಾರ ಸುಸೌಸಂಸ್ಕೃತಿ ಧಾರ್ಮಿಕತೆ ನೇಲೆಗಟ್ಟಿನಲ್ಲಿ ನಡೆದು ಬಂದ ಮಲ್ಲಿಕಾರ್ಜುನ ಆಶ್ರಮದ ಜಾತ್ರಾ ಮಹೋತ್ಸವ ಅತಿ ವಿಜ್ರಂಭಣೆಯಿಂದ ನೆರೆವೆರಿತು. ಇಷ್ಟೊಂದು ಸತತ ಮಳೆಯಿಂದಾಗಿ ಭಕ್ತರ ಆಗಮನ ಕಡಿಮೇ ಆಗಬಹುದು ಎಂದು ಉಹಿಸಲಾಗಿತ್ತು ಇದನ್ನು ಹುಸಿಗೊಳಿಸಿದ ವಿಜಯಪೂರ ಹಾಗೂ ಸುತ್ತಮುತ್ತಲಿನ ಜನರು ಸಾವಿರೋಪಾದಿ ಜನಸಂಖ್ಯೆ ಬಂದು ಗುರುಪೂರಣೆ ನಿಮಿತ್ಯ ಶಿವಯೋಗಿಗಳ ಆಶ್ರಮಕ್ಕೆ ಆಗಮಿಸಿ ಜಾತ್ರೆಗೆ ಮೆರಗು ನಿಡುವಂತಿತ್ತು.
ವಿಜಯಪೂರದ ನೂರಾರು ಗುರು ಹಿರಿಯರು ಮತ್ತು ರಾಜಕೀಯ ಮುಖಂಡರು ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿದ್ದೇಶ್ವರ ಶ್ರೀಗಳ ದರ್ಶನ ಪಡೆದುಕೊಂಡರು.